ನವದೆಹಲಿ: ಕೊರೋನಾ ಎರಡನೇ ಅಲೆಯಿಂದ ದೇಶದ ಜನ ತತ್ತರಿಸಿಹೋಗಿದ್ದಾರೆ. ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಇದೇ ಹೊತ್ತಲ್ಲಿ ದೇಶದಲ್ಲಿ ಎರಡನೇ ಅಲೆ ಇಳಿಕೆ ಸುಳಿವು ಸಿಕ್ಕಿದೆ.
ದೇಶದ 18 ರಾಜ್ಯಗಳಲ್ಲಿ ಕೊರೋನಾ ಇಳಿಮುಖವಾಗಿದ್ದು, 16 ರಾಜ್ಯಗಳಲ್ಲಿ ಏರಿಕೆಯಾಗಿದೆ. ಅನೇಕ ರಾಜ್ಯಗಳಲ್ಲಿ ಸೋಂಕಿನ ವೇಗ ಕಡಿಮೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ದೇಶದ ಒಟ್ಟು ಪ್ರಕರಣಗಳಲ್ಲಿ ಇಳಿಮುಖವಾಗುತ್ತಿದೆ. ಚೇತರಿಕೆ ಪ್ರಮಾಣ ಸುಧಾರಣೆ ಕಂಡಿದೆ. ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿನ ಮಾತ್ರ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಳವಾಗಿದೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್, ಬಿಹಾರ, ತೆಲಂಗಾಣ ಚಂಡಿಗಢ ಮೊದಲಾದ ರಾಜ್ಯಗಳಲ್ಲಿ ಸೋಂಕು ಇಳಿಮುಖವಾಗುತ್ತಿದೆ. ದೈನಂದಿನ ಹೊಸ ಸೋಂಕಿನ ಪ್ರಮಾಣ ಬಹುತೇಕ ಸ್ಥಿರವಾಗಿದೆ. ಇದೇ ವೇಳೆ ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಏರುಗತಿಯಲ್ಲಿದೆ. ಸೋಂಕು ಇಳಿಮುಖವಾಗುತ್ತಿರುವುದು ಶುಭಸುದ್ದಿಯಾಗಿದ್ದು, ಮೂರನೇ ಅಲೆ ಎದುರಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಮೈಮರೆಯದೇ ಮುನ್ನೆಚ್ಚರಿಕೆ ವಹಿಸಬೇಕಿದೆ.