ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಇವತ್ತು 16,604 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.
ನಿನ್ನೆ 20,378 ಮಂದಿಗೆ ಸೋಂಕು ತಗಲಿತ್ತು. ಬೆಂಗಳೂರಿನಲ್ಲಿ ಕೂಡ ಸೋಂಕು ಇಳಿಮುಖವಾಗಿದ್ದು, ಇವತ್ತು 3992 ಜನರಿಗೆ ಸೋಂಕು ತಗುಲಿದೆ. ನಿನ್ನೆ 4734 ಜನರಿಗೆ ಸೋಂಕು ತಗುಲಿತ್ತು. ಇಂದು ಪಾಸಿಟಿವಿಟಿ ದರ ಶೇಕಡ 13.05 ರಷ್ಟು ಇದೆ. ನಿನ್ನೆ 14.68 ರಷ್ಟು ಇತ್ತು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ್ದು, 1,22,329 ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.