ಬೆಂಗಳೂರು: ರಾಜ್ಯದಲ್ಲಿ ಇಂದು 378 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 11 ಜನರು ಮೃತಪಟ್ಟಿದ್ದಾರೆ. 8891 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 464 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.36 ರಷ್ಟು ಇದೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,85,227 ಕ್ಕೆ ಏರಿಕೆಯಾಗಿದೆ. ಇದುವರೆಗೆ 29,38,312 ಜನ ಗುಣಮುಖರಾಗಿದ್ದು, 37,995 ಜನ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 195 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 7 ಜನ ಸೋಂಕಿತರು ಮೃತಪಟ್ಟಿದ್ದಾರೆ. 6695 ಸಕ್ರಿಯ ಪ್ರಕರಣಗಳಿವೆ. 239 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 0, ಬೀದರ್ 0, ಚಿಕ್ಕಬಳ್ಳಾಪುರ 0, ದಾವಣಗೆರೆ 1, ಗದಗ 0, ಹಾವೇರಿ 0, ಕಲಬುರ್ಗಿ 0, ಕೊಪ್ಪಳ 0, ಮಂಡ್ಯ 1, ರಾಯಚೂರು 1, ರಾಮನಗರ 0, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 195, ದಕ್ಷಿಣಕನ್ನಡ 24, ಹಾಸನ 21, ಮೈಸೂರು 23, ತುಮಕೂರು 23 ಹೊಸ ಪ್ರಕರಣ ವರದಿಯಾಗಿವೆ.
ಮೃತಪಟ್ಟವರ ಸಂಖ್ಯೆ:
ಬೆಂಗಳೂರು ನಗರ 7, ದಾವಣಗೆರೆ 1, ಧಾರವಾಡ 1, ಕೋಲಾರ 1, ತುಮಕೂರು 1 ಸೇರಿ ರಾಜ್ಯದಲ್ಲಿ 11 ಜನ ಸೋಂಕಿತರು ಮೃತಪಟ್ಟಿದ್ದಾರೆ.