ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮಧುಮೇಹ ಕಾಡತೊಡಗಿದೆ. ಸೋಂಕಿನಿಂದ ಪಾರಾದವರಲ್ಲಿ ಶೇಕಡ 14.46 ರಷ್ಟು ಜನರಿಗೆ ಡಯಾಬಿಟಿಸ್ -2 ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಇಂಟರ್ ನ್ಯಾಷನಲ್ ಡಯಾಬಿಟಿಕ್ ಫೆಡರೇಶನ್(IDF) ನೀಡಿದ ವರದಿಯಲ್ಲಿ ಹೇಳಲಾಗಿದೆ.
ಕೊರೋನಾಗೆ ಚಿಕಿತ್ಸೆ ಪಡೆದು ಗುಣಮುಖರಾದವರ ಪೈಕಿ ಶೇಕಡ 14.46 ರಷ್ಟು ಮಂದಿಗೆ ಡಯಾಬಿಟಿಸ್ -2 ಕಾಣಿಸಿಕೊಂಡಿದೆ. ಕೊರೋನಾ ಸೋಂಕಿನಿಂದ ಶ್ವಾಸಕೋಶ ಮತ್ತು ಕಿಡ್ನಿಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ಗೊತ್ತಾಗಿದೆ.
ರೋಗನಿರೋಧಕ ಶಕ್ತಿ ದೇಹದಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟದೊಂದಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಯಕೃತ್ ಗೆ ಕೂಡ ಪೆಟ್ಟು ನೀಡುತ್ತಿದೆ. ಇದರಿಂದಾಗಿ ಸೋಂಕಿನಿಂದ ಗುಣಮುಖರಾದವರಲ್ಲಿ ಡಯಾಬಿಟಿಸ್ -2 ಕಾಣಿಸಿಕೊಂಡಿದೆ ಎನ್ನುವುದು ಗೊತ್ತಾಗಿದೆ.
ಕೊರೊನಾ ಸೋಂಕು ತಗುಲಿದವರಲ್ಲಿ ಯಕೃತ್ತಿನ ಬೀಟಾ ಸೆಲ್ಸ್ ಗಳಿಗೆ ಹಾನಿಯಾಗುತ್ತದೆ. ಇದರ ಪರಿಣಾಮದಿಂದ ಯಕೃತ್ ಕಾರ್ಯಚಟುವಟಿಕೆ ಕುಂಠತವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.