ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ತೀವ್ರ ಏರಿಕೆ ಕಂಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ.
ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಚಿತಾಗಾರ, ಸ್ಮಶಾನಗಳಲ್ಲಿ ದಟ್ಟಣೆ ಉಂಟಾಗಿರುವುದರಿಂದ ಪಾರ್ಕ್ ಗಳಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.
ದೆಹಲಿಯ ಅನೇಕ ಪಾರ್ಕ್ ಗಳಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಚಿತಾಗಾರ ಸಿದ್ಧಪಡಿಸಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಕೊನೆ ವಿಧಾನ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.
ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಭಾರೀ ಏರಿಕೆಯಾಗಿದ್ದು, ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸ್ಥಳಾವಕಾಶವಿಲ್ಲ. ಹಾಗಾಗಿ, ಮೃತದೇಹಗಳನ್ನು ದಹನ ಮಾಡಲು ದೆಹಲಿ ಉದ್ಯಾನವನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ, ಕೂಡ ದಟ್ಟಣೆ ಕಡಿಮೆಯಾಗಿಲ್ಲ. ಸರತಿಸಾಲಿನಲ್ಲಿ ಗಂಟೆಗಟ್ಟಲೆ ಕಾದು ಮೃತರ ಅಂತ್ಯಕ್ರಿಯೆ ನೆರವೇರಿಸಬೇಕಿದೆ. ವಿದ್ಯುತ್ ಶವಾಗಾರಗಳಲ್ಲಿಯೂ ದಟ್ಟಣೆ ಕಂಡುಬಂದಿದೆ. ಕೊರೋನಾ ಸಾವಿನ ಅಂತ್ಯಸಂಸ್ಕಾರಗಳ ದೃಶ್ಯ ಕೊರೋನಾ ಭೀಕರತೆ ಬಿಂಬಿಸುವಂತಿದೆ.