
ಕೊರೋನಾ ಭೀತಿ ನಡುವೆ ಒಂದೇ ಗ್ರಾಮದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ತಾಲೂಕಿನ ಕಾಮಾಂಡಹಳ್ಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕು ತಗುಲಿ ಮೂವರು ಹಾಗೂ ಒಬ್ಬರು ಅಸಹಜವಾಗಿ ಸಾವು ಕಂಡಿದ್ದಾರೆ. ಇದರಿಂದಾಗಿ ಕಾಮಾಂಡಹಳ್ಳಿಯಲ್ಲಿ ಸರಣಿ ಸಾವಿನಿಂದ ಜನ ಬೆಚ್ಚಿಬಿದ್ದಿದ್ದಾರೆ. ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಹಳ್ಳಿಯ ಇನ್ನೂ 12 ಮಂದಿಯಲ್ಲಿ ಸೋಂಕು ತಗುಲಿದೆ.