ನವದೆಹಲಿ: ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
COVID19 | CoWIN ಪೋರ್ಟಲ್‌ನ ಪ್ರಕಾರ ಮಕ್ಕಳಿಗೆ COVID19 ಲಸಿಕೆ ಹಾಕಿದ ಮೊದಲ ದಿನದಂದು ಸಂಜೆ 7 ಗಂಟೆಯವರೆಗೆ 15-18 ವರ್ಷದ 37,84,212 ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಇಂದು ಸಂಜೆ 5.30 ಗಂಟೆಯವರೆಗೆ 15 ರಿಂದ 18 ವರ್ಷದೊಳಗಿನ 3,80,133 ಮಕ್ಕಳಿಗೆ ಕೊರೋನಾ ಲಸಿಕೆ ಹಾಕಲಾಗಿದೆ.