ನವದೆಹಲಿ: ಕೊರೋನಾ ಮೂರನೇ ಅಲೆಯ ವೇಳೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಈ ಬಗ್ಗೆ ದೃಢವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ದಿ ಲ್ಯಾನ್ಸೆಟ್ ವರದಿ ತಿಳಿಸಿದೆ.
ಕೊರೋನಾ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಎಂಬುದರ ಕುರಿತಂತೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. ಪ್ರಖ್ಯಾತ ವೈದ್ಯರು ಸೇರಿದಂತೆ ತಜ್ಞರ ಸಮಿತಿ ಸಮಾಲೋಚನೆ ನಡೆಸಿದ ಬಳಿಕ ಕೋವಿಡ್ -19 ಆಯೋಗದ ಭಾರತೀಯ ಕಾರ್ಯಪಡೆಯು ವರದಿಯನ್ನು ಸಿದ್ಧಪಡಿಸಿದೆ.
ಬಹುತೇಕ ಮಕ್ಕಳಲ್ಲಿ ಸೋಂಕು ತಗುಲಿದರೂ ಲಕ್ಷಣಗಳು ಇರುವುದಿಲ್ಲ. ಉಸಿರಾಟ ತೊಂದರೆ ಕಾಣಿಸುತ್ತದೆ. ಜೊತೆಗೆ ವಾಂತಿ, ಹೊಟ್ಟೆನೋವು ಕೂಡ ಉಂಟಾಗಬಹುದು ಎಂದು ಹೇಳಲಾಗಿದೆ. 2600 ಮಕ್ಕಳ ಅಧ್ಯಯನ ಕೈಗೊಂಡು ವರದಿ ಸಿದ್ಧಪಡಿಸಲಾಗಿದ್ದು, ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮದ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.