ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1806 ಜನರಿಗೆ ಸೋಂಕು ತಗಲಿದ್ದು, 42 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು 2748 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 31,399 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.18 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 28,80,370 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 28,12,869 ಜನ ಗುಣಮುಖರಾಗಿದ್ದಾರೆ. 36,079 ಸೋಂಕಿತರು ಇದುವರೆಗೆ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 411 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. 549 ಜನ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದು, 12,376 ಸಕ್ರಿಯ ಪ್ರಕರಣಗಳು ಇವೆ.
ಬಾಗಲಕೋಟೆ 6. ಬಳ್ಳಾರಿ 5. ಬೀದರ್ 3. ಗದಗ 5, ಕಲಬುರಗಿ 4, ಕೊಪ್ಪಳ 2, ರಾಯಚೂರು 2, ರಾಮನಗರ 8, ವಿಜಯಪುರ 5, ಯಾದಗಿರಿ 5 ಜನರಿಗೆ ಸೋಂಕು ತಗುಲಿದೆ. ಈ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ದಕ್ಷಿಣ ಕನ್ನಡದಲ್ಲಿ 225 ಜನರಿಗೆ ಸೋಂಕು ತಗುಲಿದೆ. ಹಾಸನ 138, ಮೈಸೂರು 174, ಶಿವಮೊಗ್ಗ 110, ಉಡುಪಿ 105 ಈ ಜಿಲ್ಲೆಗಳಲ್ಲಿ 100 ಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ.
ದಕ್ಷಿಣ ಕನ್ನಡ 10, ಬೆಂಗಳೂರು ನಗರ 10, ಕೋಲಾರ 3, ಮೈಸೂರು 5 ಸೋಂಕಿತರು ಸಾವನ್ನಪ್ಪಿದ್ದಾರೆ. ಜುಲೈ 15 ರ ರಾತ್ರಿ 9 ಗಂಟೆಯವರೆಗೆ ರಾಜ್ಯದಲ್ಲಿ 2,66,10,097 ಡೋಸ್ ಲಸಿಕೆ ನೀಡಲಾಗಿದೆ.