
ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಹೊಸದಾಗಿ 16,387 ಜನರಿಗೆ ಕೊರೊನಾ ಸೋಂಕು ತಗಲಿದ್ದು, 463 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 26,35,122 ಕ್ಕೆ ಏರಿಕೆಯಾಗಿದೆ. ಇದುವರೆಗೆ 30,017 ಸೋಂಕಿತರು ಮೃತಪಟ್ಟಿದ್ದಾರೆ. ನಿನ್ನೆ 21,199 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 23,12,060 ಮಂದಿ ಗುಣಮುಖರಾಗಿಕರಾಗಿ ಬಿಡುಗಡೆಯಾಗಿದ್ದಾರೆ. 2,93,024 ಸಕ್ರಿಯ ಪ್ರಕರಣಗಳಿವೆ.

