alex Certify BIG NEWS: ಬಹುತೇಕ ಜಿಲ್ಲೆಗಳಲ್ಲೂ ಕೊರೋನಾ ಭಾರೀ ಇಳಿಕೆ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಹುತೇಕ ಜಿಲ್ಲೆಗಳಲ್ಲೂ ಕೊರೋನಾ ಭಾರೀ ಇಳಿಕೆ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಹೊಸದಾಗಿ 851 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 29,56,988 ಕ್ಕೆ ಏರಿಕೆಯಾಗಿದೆ.

ಇವತ್ತು 15 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 37,441 ಸೋಂಕಿತರು ಮೃತಪಟ್ಟಿದ್ದಾರೆ. ಇಂದು 790 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,02,089 ಜನ ಗುಣಮುಖರಾಗಿದ್ದಾರೆ.

ಪಾಸಿಟಿವಿಟಿ ದರ ಶೇಕಡ 0.71 ರಷ್ಟು ಇದೆ. ಇವತ್ತು 1,18,791 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ 17,432 ಸಕ್ರಿಯ ಪ್ರಕರಣಗಳಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 248 ಜನರಿಗೆ ಸೋಂಕು ತಗುಲಿದ್ದು, ಮೂವರು ಸೋಂಕಿತರು ಮೃತಪಟ್ಟಿದ್ದಾರೆ. 362 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7063 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ವಿವರ:

ಬೆಂಗಳೂರು ನಗರ 248, ದಕ್ಷಿಣಕನ್ನಡ 227, ಚಿಕ್ಕಮಗಳೂರು 49, ಕೊಡಗು 31, ಮೈಸೂರು 53, ತುಮಕೂರು 44, ಉಡುಪಿ 74 ಹೊಸ ಪ್ರಕರಣ ವರದಿಯಾಗಿದೆ. ಬಾಗಲಕೋಟೆ 0, ಬಳ್ಳಾರಿ 3, ಬೀದರ್ 1, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 4, ಧಾರವಾಡ 0, ಗದಗ 0, ಹಾವೇರಿ 1, ಕಲ್ಬುರ್ಗಿ 3, ಕೊಪ್ಪಳ 0, ರಾಯಚೂರು 2, ರಾಮನಗರ 1, ವಿಜಯಪುರ 0, ಯಾದಗಿರಿ 1 ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 3, ದಕ್ಷಿಣಕನ್ನಡ 4, ಹಾಸನ 1, ಕೊಡಗು 2, ಶಿವಮೊಗ್ಗ 2, ಮೈಸೂರು 2, ಉತ್ತರ ಕನ್ನಡ 1 ಸೇರಿ ರಾಜ್ಯದಲ್ಲಿ ಇಂದು 15 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...