ಕೊರೊನಾ ಲಸಿಕೆ, ಕೊರೊನಾ ವಿರುದ್ಧದ ದೊಡ್ಡ ಅಸ್ತ್ರ. ಇದೇ ಕಾರಣಕ್ಕೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ದಿನವೊಂದಕ್ಕೆ 2 ಕೋಟಿಗೂ ಹೆಚ್ಚು ಲಸಿಕೆ ಹಾಕಿ, ಭಾರತ ದಾಖಲೆ ಬರೆದಿದೆ. ಈ ಎಲ್ಲದರ ಮಧ್ಯೆ ಬ್ರಿಟನ್, ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿತ್ತು.
ಬ್ರಿಟನ್ ತನ್ನ ಪ್ರವಾಸದ ಮಾರ್ಗಸೂಚಿಯಲ್ಲಿ, ಭಾರತದ ಎರಡೂ ಲಸಿಕೆಯನ್ನು ಅಮಾನ್ಯವೆಂದಿತ್ತು. ಈ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ, ಭಾರತೀಯರು ಲಸಿಕೆ ಪಡೆಯದ ಪಟ್ಟಿಯಲ್ಲಿ ಬರ್ತಿದ್ದರು. ಆದ್ರೀಗ ಭಾರತದ ಒತ್ತಡಕ್ಕೆ ಮಣಿದ ಬ್ರಿಟನ್, ಕೋವಿಶೀಲ್ಡ್ ಗೆ ಮಾನ್ಯತೆ ನೀಡಿದೆ. ತನ್ನ ನಿರ್ಧಾರ ಬದಲಿಸಿದ ಬ್ರಿಟನ್, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರಸ್ತುತ ಬ್ರಿಟನ್ ನಲ್ಲಿ ಬೇರೆ ಬೇರೆ ಪಟ್ಟಿ ಮಾಡಿ, ಅದ್ರಲ್ಲಿ ದೇಶಗಳ ಹೆಸರನ್ನು ಸೇರಿಸಲಾಗಿತ್ತು. ಇನ್ಮುಂದೆ ಕೆಂಪು ಪಟ್ಟಿ ಬಿಟ್ಟು ಉಳಿದ ಪಟ್ಟಿಗಳನ್ನು ಸೇರಿಸಲಾಗುವುದು. ಕೆಂಪು ಪಟ್ಟಿಯಲ್ಲಿರುವ ದೇಶದ ಜನರು, ಬ್ರಿಟನ್ ಪ್ರವಾಸ ಮಾಡುವಂತಿಲ್ಲ.
ಅಕ್ಟೋಬರ್ 4ರಿಂದ ಬ್ರಿಟನ್ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು, ಬ್ರಿಟನ್ ನಲ್ಲಿ ಕಡ್ಡಾಯವಾಗಿ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.