ನವದೆಹಲಿ: ಕೊರೋನಾ ಮೊದಲ ಅಲೆಗೆ ಹೋಲಿಸಿದಾಗ ಎರಡನೇ ಅಲೆಯಲ್ಲಿ ಸೋಂಕಿನ ತೀವ್ರತೆ, ಹರಡುವಿಕೆ, ಸೋಂಕಿತರ ಪ್ರಮಾಣ ಮೊದಲಿನಂತೆಯೇ ಇದೆ. ಕೊರೋನಾ ಎರಡನೇ ಅಲೆಯಲ್ಲಿ ರೂಪಾಂತರಿ ಕೊರೋನಾ ವೈರಸ್ ಅಪಾಯಕಾರಿ ಎನ್ನುವ ವದಂತಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ.
ಎರಡನೇ ಅಲೆಯಲ್ಲಿ ಪತ್ತೆಯಾಗಿರುವ ರೂಪಾಂತರ ವೈರಸ್ ಸ್ವರೂಪ ಭೀಕರವಾಗಿದೆ. ಹಿಂದಿಗಿಂತ ಹೆಚ್ಚು ಜನರ ಪ್ರಾಣ ತೆಗೆಯುವ ಸಾಮರ್ಥ್ಯ ಹೊಂದಿದೆ ಎನ್ನುವುದು ಸುಳ್ಳಾಗಿದೆ. ಐಸಿಎಂಆರ್ ಅಧ್ಯಯನ ವರದಿಯ ಪ್ರಕಾರ, ವೈರಸ್ ಸ್ವರೂಪದಲ್ಲಿ ಹೇಳಿಕೊಳ್ಳುವ ವ್ಯತ್ಯಾಸವೇನೂ ಇಲ್ಲ. ಇದು ಹೆಚ್ಚು ಜನರ ಪ್ರಾಣ ತೆಗೆಯುತ್ತದೆ ಎನ್ನುವುದೆಲ್ಲ ಸುಳ್ಳಾಗಿದೆ. ಸೋಂಕಿತರ ಸಾವಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಕೊರೋನಾ ಸೋಂಕಿನ ತೀವ್ರತೆಯಲ್ಲಿ ವ್ಯತ್ಯಾಸವಿಲ್ಲ. ಮೊದಲ ಅಲೆಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡ 4.03 ರಷ್ಟು ಎರಡನೇ ಅಲೆಯಲ್ಲಿ ಶೇಕಡ 2.97 ರಷ್ಟು ಪ್ರಕರಣ ಕಂಡು ಬಂದಿದೆ.
10 -20 ವರ್ಷದವರಲ್ಲಿ ಮೊದಲ ಅಲೆಯಲ್ಲಿ ಶೇಕಡ 8.07 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 8.50 ರಷ್ಟು ಪ್ರಕರಣ
20 -30 ವರ್ಷದವರಲ್ಲಿ ಮೊದಲ ಅಲೆಯಲ್ಲಿ ಶೇಕಡ 20.41 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 19.35 ರಷ್ಟು ಪ್ರಕರಣ
30 -40 ರಷ್ಟು ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇಕಡ 21.05 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 21.15 ರಷ್ಟು,
40 -50 ರಷ್ಟು ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇಕಡ 17.16 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 17.50 ರಷ್ಟು
50 -60 ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇಕಡ 14.80 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 15.07 ರಷ್ಟು
60 -70 ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇಕಡ 9.01 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 9.99 ರಷ್ಟು
70 -80 ರಷ್ಟು ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇಕಡ 4.17 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 4.19 ರಷ್ಟು
80 ವರ್ಷ ಮೇಲ್ಟಪಟ್ಟವರಲ್ಲಿ ಮೊದಲ ಅಲೆಯಲ್ಲಿ ಶೇಕಡ 1.31 ರಷ್ಟು, ಎರಡನೇ ಅಲೆಯಲ್ಲಿ ಶೇಕಡ 1.28 ರಷ್ಟು ಪ್ರಕರಣ ಕಂಡು ಬಂದಿವೆ. ಅದೇ ರೀತಿ ಸಾವಿನ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವೇನೂ ಆಗಿಲ್ಲ. ಮೊದಲಿನಂತೆಯೇ ಇದೆ ಎಂದು ಹೇಳಲಾಗಿದೆ.