ತೂಕ ಇಳಿಸಿಕೊಳ್ಳುವವರಿಗೆ ಈ ಸೂಪ್ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿ:
1 ಟೇಬಲ್ ಸ್ಪೂನ್ – ಲಿಂಬೆಹಣ್ಣಿ ರಸ, ¼ ಕಪ್ – ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಟೀ ಸ್ಪೂನ್ – ಎಣ್ಣೆ, 2 ಟೀ ಸ್ಪೂನ್ – ಸಣ್ಣಗೆ ಹೆಚ್ಚಿದ ಹಸಿಮೆಣಸು, ¼ ಕಪ್ – ಸಣ್ಣಗೆ ಹೆಚ್ಚಿದ ಈರುಳ್ಳಿ, ¼ ಕಪ್ – ಸಣ್ಣಗೆ ಹೆಚ್ಚಿದ ಕ್ಯಾಬೇಜ್, ¼ ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್, 3 ಕಪ್ – ವೆಜಿಟೇಬಲ್ ಸ್ಟಾಕ್, 2 ಟೀ ಸ್ಪೂನ್ – ಕಾರ್ನ್ ಫ್ಲೋರ್.
ಮಾಡುವ ವಿಧಾನ:
ಒಂದು ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ 3 ಎಸಳು ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈರುಳ್ಳಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ. ಕ್ಯಾರೆಟ್, ಕ್ಯಾಬೇಜ್ ಸೇರಿಸಿ 1 ನಿಮಿಷಗಳ ಕಾಲ ಕೈಯಾಡಿಸಿ.
ತದನಂತರ ವೆಜಿಟೇಬಲ್ ಸ್ಟಾಕ್, ಲಿಂಬೆಹಣ್ಣಿನ ರಸ, ಉಪ್ಪು, 2 ಚಮಚ ನೀರಿನಲ್ಲಿ ಕಲಸಿಟ್ಟುಕೊಂಡ ಕಾರ್ನ್ ಪ್ಲೋರ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ.