ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟಕ್ಕೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಖಾಸಗಿ ಬಸ್, ಆಟೋ, ಟ್ಯಾಕ್ಸಿ, ಚಾಲಕರು, ಮಾಲೀಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ರಾಮಲಿಂಗಾರೆಡ್ಡಿ 30 ಬೇಡಿಕೆಗಳ ಪೈಕಿ 27 ಬೇಡಿಕೆ ಈಡೇರಿಸಲು ಬದ್ಧವೆಂದು ಹೇಳಿದ್ದರು.
ಅಂತೆಯೇ ಲಿಖಿತ ರೂಪದಲ್ಲಿ ಪ್ರೊಸೀಡಿಂಗ್ ಕಾಪಿ ಕೇಳಿದ ಸಾರಿಗೆ ಸಂಘಟನೆಗಳು ಮಂಗಳವಾರ ಸಂಜೆಯೊಳಗೆ ಪ್ರೊಸೀಡಿಂಗ್ ಕಾಪಿ ನೀಡದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಬುಧವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಕೊಟ್ಟ ಮಾತಿನಂತೆ 27 ಬೇಡಿಕೆಗಳ ಬಗ್ಗೆ ಸಚಿವರಿಂದ ಪ್ರೊಸೀಡಿಂಗ್ ಕಾಪಿ ನೀಡಲಾಗಿದೆ.
ಸಾರಿಗೆ ಇಲಾಖೆ ಆಯುಕ್ತರ ಮೂಲಕ ಸಚಿವರು ಖಾಸಗಿ ಸಾರಿಗೆ ಒಕ್ಕೂಟಕ್ಕೆ ಪ್ರೊಸೀಡಿಂಗ್ ಕಾಪಿ ನೀಡಿ ಬೇಡಿಕೆ ಈಡೇರಿಸುವ ಕುರಿತಾಗಿ ಭರವಸೆ ನೀಡಿದ್ದಾರೆ.