ಕೋತಿಯೊಂದು ಮಾಡಿದ ಕಿತಾಪತಿಯಿಂದ ಪೊಲೀಸರು ಬೆಸ್ತುಬಿದ್ದ ಪ್ರಸಂಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೋತಿಯೊಂದು ತುರ್ತು ಸ್ಪಂದನಾ ತಂಡದ 911 ಕರೆ ಮಾಡಿದ್ದು. ಪೊಲೀಸರು ಎದ್ದೆನೋ ಬಿದ್ದೆನೋ ಎಂದು ಓಡೋಡಿಕೊಂಡು ಕರೆ ಬಂದ ವಿಳಾಸಕ್ಕೆ ಧಾವಿಸಿದ್ದಾರೆ.
ಅದಕ್ಕೂ ಮುನ್ನ ಕರೆ ಮಾಡಿದ ಕಡೆಯಿಂದ ಸ್ಪಂದನೆ ಇರಲಿಲ್ಲ. ಕರೆ ಸಂಪರ್ಕ ಕಡಿತಗೊಂಡ ಬಳಿಕ ಪೊಲೀಸರು ಮತ್ತೆ ಕರೆ ಮಾಡಿ, ಮೆಸೇಜ್ ಕಳುಹಿಸಲು ಪ್ರಯತ್ನಿಸಿದರು ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ, ಆದ್ದರಿಂದ ಏನಾಗಿದೆ ಎಂದು ನೋಡಲು ಕರೆ ಮಾಡಿದ ಸ್ಥಳಕ್ಕೆ ಒಂದು ತಂಡ ಧಾವಿಸಿದೆ.
ವಿಳಾಸವು ಪಾಸೊ ರೋಬಲ್ಸ್ ಬಳಿ ಯೂ ಟು ಯು ಎಂದಿತ್ತು. ಆದರೆ ಅಲ್ಲಿ ಯಾರೂ ಕರೆ ಮಾಡಿರಲಿಲ್ಲ ಎಂದು ಕಂಡುಕೊಂಡರು. ಆದರೆ, ರೂಟ್ ಎಂಬ ಹೆಸರಿನ ಕ್ಯಾಪುಚಿನ್ ಕೋತಿಯು ಗಾಲ್ಫ್ ಕಾರ್ಟ್ನಲ್ಲಿದ್ದ ಮೃಗಾಲಯದ ಸೆಲ್ಫೋನ್ ಅನ್ನು ಎತ್ತಿಕೊಂದು ನಂಬರ್ ಒತ್ತಿದೆ ಎಂಬುದು ನಂತರ ಅವರ ಗಮನಕ್ಕೆ ಬಂದಿದೆ.
ಮೃಗಾಲಯದ 40 ಎಕರೆ ವಿಸ್ತಾರ ಪ್ರದೇಶದಲ್ಲಿ ಗಾಲ್ಫ್ ಕಾರ್ಟ್ ಅನ್ನು ಗಮನಿಸದೆ ಬಿಡಲಾಗಿತ್ತು, ಕುತೂಹಲಕಾರಿ ಪುಟ್ಟ ಕೋತಿಯು ಗಾಲ್ಫ್ ಕಾರ್ಟ್ನಲ್ಲಿದ್ದ ಸೆಲ್ ಫೋನ್ ಕೈಗೆತ್ತಿಕೊಂಡು 911 ಅನ್ನು ಡಯಲ್ ಮಾಡಿದೆ.
ಫೇಸ್ಬುಕ್ನಲ್ಲಿ, ಇದೊಂದು ಕ್ಲಾಸಿಕ್ ಕೇಸ್ ಎಂದು ಅಧಿಕಾರಿಗಳು ಬರೆದುಕೊಂಡಿದ್ದಾರೆ. ಆ ಕೋತಿಯ ಚಿತ್ರವನ್ನೂ ಸಹ ಶೇರ್ ಮಾಡಿದ್ದು, ಆಕಸ್ಮಿಕವಾಗಿ 911 ಸಂಖ್ಯೆ ಒತ್ತಿದೆ ಎಂದು ಮಂಕೀ ಸೀ, ಮಂಕಿ ಡೂ ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ.