ಅಕ್ರಮ ಮದ್ಯ ಸೇವನೆಯಿಂದ ಡಜ಼ನ್‌ಗಟ್ಟಲೇ ಕುಡುಕರು ಮೃತಪಟ್ಟ ಕೆಲ ದಿನಗಳ ಬಳಿಕ ಬಿಹಾರ ಪೊಲೀಸರು ಲಿಕ್ಕರ್ ಮಾಫಿಯಾ ವಿರುದ್ಧ ದಾಳಿ ನಡೆಸುತ್ತಿದ್ದಾರೆ.
ಲಿಕ್ಕರ್ ಮಾಫಿಯಾ ವಿರುದ್ಧ ಕಠಿಣ ನಿಲುವು ತಾಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ನೀಡಿದ್ದಾರೆ. ಇದಾದ ಬೆನ್ನಿಗೇ ಮದುವೆ ಸಮಾರಂಭಗಳನ್ನೂ ಬಿಡದೇ ಜನಸಮೂಹ ಸೇರುವ ಎಲ್ಲಾ ಕಡೆಯಲ್ಲೂ ಪೊಲೀಸರು ಕಣ್ಣಿಟ್ಟಿದ್ದಾರೆ.
ಅಕ್ರಮ ಮದ್ಯದ ದಾಸ್ತಾನು ಇದೆ ಎಂಬ ಸುಳಿವು ಸಿಕ್ಕಾಗ ಮದುವೆ ಮನೆಗಳಲ್ಲಿ ಹೆಣ್ಣಿನ ಕೊಠಡಿಯನ್ನೂ ಬಿಡದೇ ಪೊಲೀಸರು ಎಡತಾಕುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಪಟನಾದಿಂದ ವರದಿಯಾಗಿದೆ.
BIG NEWS: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ
ನಗರದ ರಾಮಕೃಷ್ಣ ನಗರದ ಮದುವೆ ಮನೆಯೊಂದರಲ್ಲಿ ಪೊಲೀಸರು ರೇಡ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದೇ ವೇಳೆ ಹೆಣ್ಣಿನ ಕೋಣೆಗೆ ನುಗ್ಗಿದ ಪೊಲೀಸರು ಮದ್ಯದ ದಾಸ್ತಾನು ಇದೆಯೇ ಎಂದು ಪರೀಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಪೊಲೀಸರು ತಮ್ಮೊಂದಿಗೆ ಮಹಿಳಾ ಪೇದೆಗಳನ್ನು ಕರೆದೊಯ್ದಿಲ್ಲ.
ಪೊಲೀಸರ ಈ ವರ್ತನೆಗಳು ನೆಟ್ಟಿಗರಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿವೆ.
ಪೊಲೀಸರ ಈ ನಡೆಯನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ರಾಬರಿ ದೇವಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.