
ರಿಯೊ ಡಿ ಜನೈರೋ: ಶನಿವಾರ ನಡೆದಿದ್ದ ಕೋಪಾ ಅಮೆರಿಕ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬ್ರೆಜಿಲ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು. ಈ ಸಂಭ್ರಮಾಚರಣೆಯನ್ನು ಲಿಯೋನೆಲ್ ಮೆಸ್ಸಿ ಸಂತೋಷದಿಂದ ಕಿರುಚುತ್ತಾ ತನ್ನ ಕುಟುಂಬದದೊಂದಿಗೆ ವಿಡಿಯೋ ಕಾಲ್ ಮುಖಾಂತರ ಖುಷಿಯನ್ನು ಹಂಚಿಕೊಂಡಿದ್ದಾರೆ.
ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ ತಂಡದೊಂದಿಗೆ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡ ಜತೆಯಲ್ಲೇ ಮೈದಾನದಿಂದಲೇ ತಮ್ಮ ಕುಟುಂಬದೊಂದಿಗೆ ಗೆಲುವಿನ ಸಂತಸ ಹಂಚಿಕೊಂಡರು. ವಿಜೇತ ಪದಕಕ್ಕೆ ಮುತ್ತಿಡುತ್ತಾ ಮೈದಾನದಲ್ಲೇ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಖುಷಿಯನ್ನು ಹಂಚಿಕೊಂಡರು. ಇದಕ್ಕೂ ಮೊದಲು ಪಂದ್ಯ ಮುಗಿದಾಗ, ಖುಷಿಯಿಂದ ಕಣ್ಣೀರಾಗಿದ್ದ ಮೆಸ್ಸಿಯನ್ನು ಅವರ ತಂಡದ ಸದಸ್ಯರು ಎತ್ತಿ ಗಾಳಿಯಲ್ಲಿ ತೇಲಿಸಿದ್ದರು.
ಮನೆ ಬಿಟ್ಟು ಬಂದ ಬಾಲಕಿ ಹೇಳಿದ ಬೆಚ್ಚಿಬೀಳಿಸುವ ರಹಸ್ಯ
ರಿಯೊ ಡಿ ಜನೈರೋದ ಮರಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿ, 28 ವರ್ಷಗಳಲ್ಲಿ ಮೊದಲ ಕೋಪಾ ಅಮೆರಿಕ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದು ಬೀಗಿತು. ಕೊನೆಯದಾಗಿ 1993ರಲ್ಲಿ ಈಕ್ವೆಡಾರ್ನಲ್ಲಿ ಮೆಕ್ಸಿಕೋ ವಿರುದ್ಧ ಪ್ರಶಸ್ತಿ ಗೆದ್ದಿತ್ತು.
ಇನ್ನು ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಲಿಯೋನೆಲ್ ಮೆಸ್ಸಿ ಅವರಿಂದ ಫೈನಲ್ ಪಂದ್ಯದಲ್ಲಿ ಅಂತಹ ನಿರೀಕ್ಷಿತ ಆಟ ಕಂಡು ಬರಲಿಲ್ಲ. 88ನೇ ನಿಮಿಷದಲ್ಲಿ ಗೋಲು ಗಳಿಸುವ ಸನಿಹಕ್ಕೆ ಹೋದರಾದರೂ ಸಾಧ್ಯವಾಗಲಿಲ್ಲ. ಆದರೆ, ನಾಯಕನಾಗಿ 28 ವರ್ಷಗಳ ಬಳಿಕ ಪಮುಖ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
https://www.instagram.com/p/CRLDvfUg4Ky/?utm_source=ig_web_copy_link