alex Certify ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಸಸ್ಪೆಂಡ್

13 ವರ್ಷದ ಮಗುವಿಗೆ ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಘಟನೆಯು ಗುಜರಾತ್​​ನ ವಡೋದರಾದಲ್ಲಿ ಶನಿವಾರ ನಡೆದಿದೆ . ವಡೋದರಾದ ನಂದೇಸರಿ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿದ್ದು ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ.

ಅಮಾನತುಗೊಂಡ ಪೊಲೀಸ್​ ಅಧಿಕಾರಿಯನ್ನು ಶಕ್ತಿಸಿನ್ಹ ಪರ್ವಾ ಎಂದು ಗುರುತಿಸಲಾಗಿದೆ. ಚನ್ನಿ ಪೊಲೀಸ್​ ಠಾಣೆಯ ಸಿಬ್ಬಂದಿ ಇವರಾಗಿದ್ದಾರೆ ಎನ್ನಲಾಗಿದೆ.

ತೈಲ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್;‌ ತರಕಾರಿಗಳೂ ಈಗ ಬಲು ದುಬಾರಿ

ಪರ್ವಾ ಸರ್ಕಾರಿ ವಾಹನವನ್ನು ಬಳಸಿ ಮತ್ತೊಂದು ಪೊಲೀಸ್​ ಠಾಣೆಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ರಸ್ತೆ ದಾಟುತಿದ್ದ ಬಾಲಕ ಇವರನ್ನು ಕಂಡು ಏನೋ ಗೊಣಗುತ್ತಿದ್ದಾನೆ ಎಂಬುದನ್ನು ಗಮನಿಸಿದ ಪರ್ವಾ ವಾಹನದಿಂದ ಕೆಳಗಿಳಿದು ಬಾಲಕನಿಗೆ ಅನೇಕ ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಬಾಲಕನ ಕೈಯನ್ನೂ ತಿರುಪಿದ್ದಾರೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ ಡಿಸಿಪಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...