ಬೀದಿಬದಿ ವಾಸಿಸುವ ನಿರ್ಗತಿಕರು ವಾಹನಗಳ ದಾಳಿ, ಪ್ರಾಣಿಗಳ ದಾಳಿಗಷ್ಟೇ ಒಳಗಾಗುವುದಿಲ್ಲ. ಮನುಷ್ಯರ ಉದ್ದೇಶಪೂರ್ವಕ ದಾಳಿಗೂ ಒಳಗಾಗುತ್ತಾರೆ. ಪೊಲೀಸರ ಚಿತ್ರಹಿಂಸೆಯನ್ನೂ ಅನುಭವಿಸುತ್ತಾರೆ. ಆದರೆ ದಾಳಿ ಮಾಡಿದವರು ಕರ್ಮ ಅನುಭವಿಸಲೇಬೇಕಾಗುತ್ತದೆ ಎಂಬ ಮಾತಿದೆ. ಈ ಮಾತು ವೈರಲ್ ವಿಡಿಯೋದಲ್ಲಿ ಸಾಬೀತಾಗಿದೆ.
ರಸ್ತೆ ಬದಿಯಲ್ಲಿ ನಿರಾಶ್ರಿತ ಮಹಿಳೆಯೊಬ್ಬರು ಮಲಗಿರುತ್ತಾರೆ. ಅವರನ್ನು ಮಹಿಳಾ ಟ್ರಾಫಿಕ್ ಪೊಲೀಸರು ಕಾಲಿನಿಂದ ಒದ್ದು ಅಲ್ಲಿಂದ ಹೋಗುವಂತೆ ಸೂಚಿಸುತ್ತಾರೆ. ಪೊಲೀಸ್ ಹೊಡೆತಕ್ಕೆ ಮಹಿಳೆ ತೆವಳುತ್ತಲೇ ಸಾಗುತ್ತಾಳೆ. ಆಕೆಯ ವಸ್ತುಗಳನ್ನೂ ಪೊಲೀಸ್ ಕಾಲಿನಿಂದ ಒದೆಯುತ್ತಾರೆ.
ನಂತರ ಮಹಿಳಾ ಪೊಲೀಸ್ ಗೆ ತಲೆ ಸುತ್ತಿದ್ದು ಅವರು ನಿತ್ರಾಣರಾದವರಂತೆ ಅಲ್ಲಿಯೇ ಕುಸಿದುಬೀಳುತ್ತಾರೆ. ತಕ್ಷಣ ಹಲ್ಲೆಗೊಳಗಾಗಿದ್ದ ನಿರ್ಗತಿಕ ಮಹಿಳೆ, ಮಹಿಳಾ ಟ್ರಾಫಿಕ್ ಪೊಲೀಸರ ಸಹಾಯಕ್ಕೆ ಧಾವಿಸಿದ್ದಾರೆ. ಅವರನ್ನು ಏಳಿಸಲು ತನ್ನ ಬಾಟಲಿಯಿಂದ ನೀರನ್ನು ಅವರ ಮುಖದ ಮೇಲೆ ಚಿಮುಕಿಸುತ್ತಾರೆ. ಬಳಿಕ ಮಹಿಳಾ ಪೊಲೀಸ್ ಅಧಿಕಾರಿಗೆ ಪ್ರಜ್ಞೆ ಮರಳುತ್ತದೆ. ತನ್ನ ತಪ್ಪಿನ ಅರಿವಾಗಿ ಮಹಿಳಾ ಪೊಲೀಸ್ ಅಧಿಕಾರಿ ತನ್ನ ನೆರವಿಗೆ ಬಂದ ನಿರ್ಗತಿಕ ಮಹಿಳೆಯ ಕಾಲಿಗೆ ಬೀಳುತ್ತಾರೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು ಕರ್ಮ ರಿಟರ್ನ್ಸ್ ಎಂದು ಹಂಚಿಕೊಳ್ಳಲಾಗಿದೆ. ಆದರೆ ವಿಡಿಯೋ ಉದ್ದೇಶಪೂರ್ವಕವಾಗಿ ಮಾಡಿರುವ ರೀಲ್ಸ್ ನಂತೆ ಕಂಡರೂ ಇದರ ಉದ್ದೇಶ ಮತ್ತು ನೀತಿ ಗಮನ ಸೆಳೆದಿದೆ.