
ಪ್ರಕರಣದ ವಿವರ: ಈ ಘಟನೆ ಕನೋಜ್ ನಗರದ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಡೆದ ಅತ್ಯಾಚಾರದ ಕುರಿತು ದೂರು ನೀಡಲು ಮಹಿಳೆಯೊಬ್ಬರು ಠಾಣೆಗೆ ಬಂದಿದ್ದರು. ಈ ವೇಳೆ ಠಾಣಾಧಿಕಾರಿ ಅನುಪ್ ಕುಮಾರ್ ಮೌರ್ಯ ತನ್ನನ್ನು ಪ್ರತ್ಯೇಕವಾಗಿ ಭೇಟಿಯಾಗುವಂತೆ ಆಕೆಗೆ ತಿಳಿಸಿದ್ದಾನೆ.
ಅನುಪ್ ಕುಮಾರ್ ಮೌರ್ಯ ಹೇಳಿದಂತೆ ಸಂತ್ರಸ್ತೆ ಆತನ ಮನೆಗೆ ಹೋದ ಸಂದರ್ಭದಲ್ಲಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದೆ. ಇದೀಗ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.