![](https://kannadadunia.com/wp-content/uploads/2023/09/Cool-Suresh-Apology-Video-784x441-1.jpg)
ಬುಧವಾರದಂದು ಚೆನ್ನೈನಲ್ಲಿ ನಡೆದ ಸರಕ್ಕು ಸಿನಿಮಾದ ಆಡಿಯೋ ರಿಲೀಸ್ ಸಮಾರಂಭದಲ್ಲಿ ನಟ ಕೂಲ್ ಸುರೇಶ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮನ್ಸೂರ್ ಅಲಿ ಖಾನ್ ಕೂಡ ಇದ್ದರು. ಕೊರಳಲ್ಲಿ ಹಾರ ಹಾಕಿಕೊಂಡು ವೇದಿಕೆಯಿಂದ ನಿಂತ ಸುರೇಶ್, ಈ ಕಾರ್ಯಕ್ರಮದ ನಿರೂಪಕರಿಗೂ ಮೆಚ್ಚುಗೆ ನೀಡಬೇಕು ಎಂದು ಹೇಳುವ ಮೂಲಕ ಬಲವಂತದಿಂದ ನಿರೂಪಕಿಗೆ ಹಾರ ತೊಡಿಸಿದ್ದಾರೆ.
ಇದರಿಂದ ಕೋಪಗೊಂಡ ನಿರೂಪಕಿ ಸಿಟ್ಟಿನಿಂದ ಹಾರವನ್ನು ತೆಗೆದು ನೆಲಕ್ಕೆ ಎಸೆದಿದ್ದಾರೆ. ಇದಾದ ಬಳಿಕ ಸುರೇಶ್ ನಿರೂಪಕಿಗೆ ಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಆದರೆ ಈ ಎಲ್ಲಾ ಘಟನೆಯಿಂದ ಅಸಮಾಧನಗೊಂಡ ಮನ್ಸೂರ್ ಮಹಿಳೆಯ ಬಳಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಸುರೇಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅನೇಕರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದು ನಟ ಕೂಲ್ ಸುರೇಶ್ ವರ್ತನೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಮಹಿಳೆಯೊಂದಿಗೆ ಅವರು ಈ ರೀತಿ ವರ್ತಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ ಅಂತಾ ಕಿಡಿಕಾರಿದ್ದಾರೆ