alex Certify ತಂಪು ‘ಕನ್ನಡಕ’ ಕೇವಲ ಫ್ಯಾಷನ್ ಗಷ್ಟೇ ಅಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಪು ‘ಕನ್ನಡಕ’ ಕೇವಲ ಫ್ಯಾಷನ್ ಗಷ್ಟೇ ಅಲ್ಲ….!

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ ಗಳ ಬಗ್ಗೆ ನಮ್ಮಲ್ಲಿ ಕೆಲವೊಂದು ತಪ್ಪು ಗ್ರಹಿಕೆಗಳಿವೆ. ಹಾಗಾಗಿ ಸೂಕ್ತ ಸನ್ ಗ್ಲಾಸ್ ಆಯ್ಕೆ ಮಾಡಿಕೊಳ್ಳುವಲ್ಲಿ ನಾವು ಎಡವುತ್ತೇವೆ. ಅವು ಯಾವುವು ಅನ್ನೋದನ್ನು ನೋಡೋಣ.

ಸನ್ ಗ್ಲಾಸ್ ಕೇವಲ ಒಂದು ಫ್ಯಾಷನ್ ಎಕ್ಸೆಸ್ಸರಿ ಎಂಬ ಅಭಿಪ್ರಾಯ

ತಂಪು ಕನ್ನಡಕ ಕೇವಲ ಫ್ಯಾಷನ್ ಗಷ್ಟೆ ಅನ್ನೋ ಭಾವನೆ ಜನರಲ್ಲಿದೆ. ತಮ್ಮ ಸ್ಟೈಲ್ ಮತ್ತು ಅಪಿಯರೆನ್ಸ್ ಗೆ ಪರ್ಫೆಕ್ಟ್ ಎನಿಸುವಂತಹ ಕೂಲಿಂಗ್ ಗ್ಲಾಸ್ ಅನ್ನು ಆಯ್ಕೆ ಮಾಡಿಕೊಳ್ತಾರೆ. ಆದ್ರೆ ತಂಪು ಕನ್ನಡಕ ನಿಮ್ಮ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಪ್ರಜ್ವಲಿಸುವ ಬಿಸಿಲು ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

ಕನ್ನಡಕ ಬಂದಿದ್ದರೆ ಸನ್ ಗ್ಲಾಸ್ ಬಳಸಬಾರದು ಎಂಬ ಭಾವನೆ

ಎಷ್ಟೋ ಮಂದಿಗೆ ದೃಷ್ಟಿದೋಷವಿರುತ್ತದೆ. ಹಾಗಾಗಿ ಅವರು ಕನ್ನಡಕ ಧರಿಸ್ತಾರೆ. ಯಾರ ಕಣ್ಣಿಗೆ ಕನ್ನಡಕ ಬಂದಿದೆಯೋ ಅವರು ಕೂಲಿಂಗ್ ಗ್ಲಾಸ್ ಬಳಸಬಾರದು ಅನ್ನೋ ಆತಂಕ ಕೂಡ ಇದೆ. ಕನ್ನಡಕ ಬಳಸುವವರು ಕೂಡ ದೃಷ್ಟಿಮಾಪನಕಾರರನ್ನು ಭೇಟಿಯಾಗಿ ಅವರ ಸಲಹೆಯಂತೆ ನಿಮಗೆ ಸೂಕ್ತವಾದ ಸನ್ ಗ್ಲಾಸ್ ಪಡೆದುಕೊಳ್ಳಬಹುದು.

ಚಳಿಗಾಲದಲ್ಲಿ ತಂಪು ಕನ್ನಡಕದ ಅಗತ್ಯವಿಲ್ಲವೆಂಬ ಭಾವನೆ

ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಕಣ್ಣಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಹಾಗಾಗಿ ಚಳಿಗಾಲದಲ್ಲಿ ಸನ್ ಗ್ಲಾಸ್ ಹಾಕಿಕೊಳ್ಳುವ ಅಗತ್ಯವಿಲ್ಲ ಎಂದೇ ಎಲ್ಲರೂ ಭಾವಿಸಿದ್ದಾರೆ. ಚಳಿಗಾಲದಲ್ಲಿ ಸೂರ್ಯನ ಉಷ್ಣತೆ ಕಡಿಮೆ ಎನಿಸಿದರೂ ಅದರಿಂದ ಹೊರಸೂಸಲ್ಪಡುವ ಯುವಿ ವಿಕಿರಣ ಬದಲಾಗಿರುವುದಿಲ್ಲ. ಚಳಿಗಾಲವಿರಲಿ, ಬೇಸಿಗೆಯಿರಲಿ ಯುವಿ ರೇಡಿಯೇಶನ್ ನಿಂದ ನಿಮ್ಮ ಕಣ್ಣು ಮತ್ತು ಸುತ್ತಲ ಚರ್ಮಕ್ಕಾಗುವ ಹಾನಿ ತಪ್ಪಿಸಲು ಸನ್ ಗ್ಲಾಸ್ ಬಳಸಿ.

ಎಲ್ಲ ಸನ್ ಗ್ಲಾಸ್ ಗಳು ಯುವಿ ವಿಕಿರಣದಿಂದ ಕಣ್ಣನ್ನು ರಕ್ಷಿಸುತ್ತವೆ ಎಂಬ ಗ್ರಹಿಕೆ

ಸನ್ ಗ್ಲಾಸ್ ಅಂದಾಕ್ಷಣ ಅದು ಯುವಿ ರೇಡಿಯೇಶನ್ ನಿಂದ ಕಣ್ಣುಗಳನ್ನು ರಕ್ಷಿಸುತ್ತದೆ ಎಂಬ ಭಾವನೆ ತಪ್ಪು. ಕನ್ನಡಕದ ಲೆನ್ಸ್ ಗೆ ಒಂದು ಕೋಟಿಂಗ್ ಇದ್ದಲ್ಲಿ ಮಾತ್ರ ಅದು ನಿಮ್ಮ ಕಣ್ಣುಗಳನ್ನು ಅಲ್ಟ್ರ ವಯಲೆಟ್ (ಯುವಿ) ವಿಕಿರಣದಿಂದ ರಕ್ಷಿಸಲು ಸಾಧ್ಯ. ಒಳ್ಳೆಯ ಗುಣಮಟ್ಟದ ಫೈಬರ್ ಆಗಿದ್ದರೂ ಕೆಲವು ಕನ್ನಡಕಗಳು ವಿಕಿರಣದಿಂದ ಕಣ್ಣುಗಳನ್ನು ರಕ್ಷಿಸುವುದಿಲ್ಲ. ಯುವಿ ರೇಡಿಯೇಶನ್ ಅನ್ನು ಶೇ.99-100 ರಷ್ಟು ತಡೆಯಬಲ್ಲ ಕನ್ನಡಕಗಳನ್ನು ಖರೀದಿಸಿ.

ಏನನ್ನೂ ಹಾಕದೇ ಇರುವುದಕ್ಕಿಂತ ಯಾವುದಾದರೊಂದು ಸನ್ ಗ್ಲಾಸ್ ಹಾಕೋಣ ಎಂಬ ಭಾವನೆ

ಕಣ್ಣಿಗೆ ಸ್ವಲ್ಪವಾದ್ರೂ ರಕ್ಷಣೆ ಸಿಗಲಿ ಎಂದುಕೊಂಡು ಜನರು ಯಾವುದಾದರೊಂದು ತಂಪು ಕನ್ನಡಕವನ್ನು ಆಯ್ಕೆ ಮಾಡಿಕೊಂಡು ಬಿಡ್ತಾರೆ. ಆದ್ರೆ ಅಂತಹ ಅಗ್ಗದ ಕನ್ನಡಕಗಳಿಂದ ನಿಮ್ಮ ಕಣ್ಣಿಗೆ ಹಾನಿಯಾಗಬಹುದು. ಯುವಿಎ ಮತ್ತು ಯುವಿಬಿ ರಕ್ಷಣೆ ನೀಡದೆ ಕೇವಲ ಶೇಡ್ ಮಾತ್ರ ಇರುವ ಕನ್ನಡಕಗಳಿಂದ ನಿಮ್ಮ ಕಣ್ಣುಗಳಿಗೆ ಹಾನಿಯಾಗುತ್ತದೆ,  ಅವು ಅಪಾಯಕಾರಿ ವಿಕಿರಣಗಳನ್ನು ಸೆಳೆದುಕೊಳ್ಳುತ್ತವೆ. ಹಾಗಾಗಿ ಉತ್ತಮ ಗುಣಮಟ್ಟದ ಸನ್ ಗ್ಲಾಸ್ ಗಳನ್ನೇ ಕೊಂಡುಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...