ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ಗಣ’ ಚಿತ್ರ ಇದೇ ಜನವರಿ 31 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಪ್ರಜ್ವಲ್ ದೇವರಾಜ್ ನಟನೆಯ ಈ ಚಿತ್ರದ ತಂಪಾದ ತಂಗಾಳಿ ಎಂಬ ವಿಡಿಯೋ ಹಾಡೊಂದು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ಮೇಘನಾ ಕುಲಕರ್ಣಿ ಗೀತೆಗೆ ಧ್ವನಿಯಾಗಿದ್ದು, ಅನೂಪ್ ಸೀಳಿನ್ ಎಸ್ ಜೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಇನ್ನುಳಿದಂತೆ ಕರಿಬಸವ ತಡಕಲ್ ಅವರ ಸಾಹಿತ್ಯವಿದೆ.
ಚೆರ್ರಿ ಕ್ರಿಯೇಶನ್ಸ್ ಬ್ಯಾನರ್ ನಡಿ ಪಾರ್ಥು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಜ್ವಲ್ ದೇವರಾಜ್ ಸೇರಿದಂತೆ ವೇದಿಕಾ, ಯಶ ಶಿವಕುಮಾರ್ ಬಣ್ಣ ಹಚ್ಚಿದ್ದಾರೆ. ಹರೀಶ್ ಕೊಮ್ಮೆ ಸಂಕಲನ, ಸತೀಶ್ ಪೆರ್ಡೂರು ಕಲಾ ನಿರ್ದೇಶನ ಜೈ ಆನಂದ್ ಛಾಯಾಗ್ರಹಣವಿದೆ.