ಹೆಚ್ಚಿನ ಜನರು ಆರೋಗ್ಯವನ್ನು ಬಿಟ್ಟು ರುಚಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಇದರಿಂದ ಅವರು ಸಮಸ್ಯೆಗೊಳಗಾಗುತ್ತಾರೆ. ಹಾಗಾಗಿ ಯಾವುದೇ ಆಹಾರವನ್ನು ಸೇವಿಸುವಾಗ ಸರಿಯಾದ ರೀತಿಯಲ್ಲಿ ಸೇವಿಸುವುದನ್ನು ಮರೆಯಬೇಡಿ. ಅದರಲ್ಲೂ ಈ ಆಹಾರವನ್ನು ಬೇಯಿಸಿ ಸೇವಿಸಿದರೆ ಒಳ್ಳೆಯದು.
ಪನ್ನೀರ್ : ಪನ್ನೀರ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅಂದಮಾತ್ರಕ್ಕೆ ಅದನ್ನು ಬೇಯಿಸಿ ತಿಂದರೆ ಒಳ್ಳೆಯದು. ಅದನ್ನು ಹಸಿಯಾಗಿ ತಿಂದರೆ ಅದರಿಂದ ಗಂಟಲು ಸೋಂಕಿನ ಸಮಸ್ಯೆ ಕಾಡುತ್ತದೆ.
ಆಲೂಗಡ್ಡೆ : ಆಲೂಗಡ್ಡೆಯನ್ನು ಯಾವಾಗಲೂ ಬೇಯಿಸಿ ತಿನ್ನಿ, ಇದನ್ನು ಬೇಯಿಸುವುದರಿಂದ ಇದರಲ್ಲಿರುವ ಕ್ಯಾಲೋರಿ ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು.
ಬ್ರೊಕೊಲಿ : ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಂ, ವಿಟಮಿನ್ ಸಿ ಮತ್ತು ಕೆ ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಇದನ್ನು ಹಸಿಯಾಗಿ ತಿನ್ನುತ್ತಾರೆ. ಇದರಿಂದ ನಿಮ್ಮ ಆರೋಗ್ಯ ಕೆಡಬಹುದು. ಹಾಗಾಗಿ ಇದನ್ನು ಬೇಯಿಸಿ ತಿನ್ನಿ.
ಜೋಳ : ಜೋಳ ಹುರಿದು ಅಥವಾ ಬೇಯಿಸಿ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ. ಆದರೆ ಕೆಲವರು ಇದನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇದು ಬದಲಾಗುತ್ತಿರುವ ಹವಾಮಾನದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆಯಂತೆ.
ಮೊಟ್ಟೆ : ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದರೆ ಇದನ್ನು ಬೇಯಿಸಿ ತಿಂದರೆ ಉತ್ತಮ. ಇಲ್ಲವಾದರೆ ಇದರಲ್ಲಿರುವ ಬ್ಯಾಕ್ಟೀರಿಯಾ ಹೊಟ್ಟೆ ಸೇರಿ ಅನೇಕ ಸಮಸ್ಯೆಯನ್ನುಂಟುಮಾಡುತ್ತದೆ.
ಹಾಗಾಗಿ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸುವಾಗ ಬೇಯಿಸಿ ತಿನ್ನುವುದು ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.