ಬೆಂಗಳೂರು: ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ಶ್ರೀನಿವಾಸ ಅಯ್ಯರ್ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
1 ಕೋಟಿ ರೂಪಾಯಿ ದಂಡಪಾವತಿಸದಿದ್ದರೆ ಎರಡು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ನೀಡಲಾಗಿದೆ. ಬೆಂಗಳೂರಿನ ಸಿಸಿಹೆಚ್ 78ನೇ ನ್ಯಾಯಾಲಯದಿಂದ ಶಿಕ್ಷೆ ಪ್ರಕಟಿಸಲಾಗಿದೆ. ವಿಶೇಷ ನ್ಯಾಯಾಧೀಶರಾದ ಎಸ್.ವಿ. ಶ್ರೀಕಾಂತ್ ಅವರಿಂದ ಆದೇಶ ನೀಡಲಾಗಿದೆ.
ಯಲಹಂಕ ಪೊಲೀಸ್ ತರಬೇತಿ ಶಾಲೆಯ ಅಧೀಕ್ಷಕನಾಗಿದ್ದ ಶ್ರೀನಿವಾಸ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು 2007 ರಲ್ಲಿ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಆದಾಯ ಮೀರಿ ಶೇಕಡ 53.58 ರಷ್ಟು ಅಕ್ರಮ ಆಸ್ತಿ ಹೊಂದಿದ್ದಕ್ಕೆ ಶಿಕ್ಷೆ ನೀಡಲಾಗಿದೆ.