ಈ ಹಿಂದೆ ಮತದಾರರ ಗುರುತಿನ ಚೀಟಿಯನ್ನು ಲ್ಯಾಮಿನೇಟ್ ಮಾಡಿದ ಕಾಗದದ ಮೇಲೆ ನೀಡಲಾಗುತ್ತಿತ್ತು. ಆದರೆ ಈ ರೀತಿಯ ಕಾರ್ಡ್ ಬಹಳ ಸಮಯ ಬಾಳಿಕೆ ಬರುವುದಿಲ್ಲ, ಬೇಗನೆ ಹಾಳಾಗುತ್ತದೆ. ಇದರ ಬದಲು ಜನಸಾಮಾನ್ಯರು PVC ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದು. ಇದು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಹಾಗಾಗಿ ಬೇಗನೆ ಹಾಳಾಗುವುದಿಲ್ಲ.
ಸುಲಭವಾಗಿ ಹರಿದು ಹೋಗುವುದಿಲ್ಲ ಅಥವಾ ನೀರು ಬಿದ್ದರೂ ಹಾಳಾಗುವುದಿಲ್ಲ. PVC ವೋಟರ್ ಐಡಿ ಹೊಲೊಗ್ರಾಮ್, ಮೈಕ್ರೋಪ್ರಿಂಟಿಂಗ್ ಮತ್ತು UV ಇಂಕ್‌ನಂತಹ ಬಹು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. ಈ ವೈಶಿಷ್ಟ್ಯಗಳು ಕಾರ್ಡ್ ಅನ್ನು ನಕಲಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಳೆಯ ಮತದಾರರ ಗುರುತಿನ ಚೀಟಿಯನ್ನು PVC ಕಾರ್ಡ್ ಆಗಿ ಪರಿವರ್ತಿಸಲು ನೀವು ಬಯಸಿದರೆ ಅದರ ಪ್ರಕ್ರಿಯೆ ಕೂಡ ಬಹಳ ಸುಲಭವಾಗಿದೆ.
ಆನ್‌ಲೈನ್‌ನಲ್ಲೇ ಸಲ್ಲಿಸಬಹುದು ಅರ್ಜಿ
ಚುನಾವಣಾ ಆಯೋಗದ ವೆಬ್‌ಸೈಟ್ https://eci.gov.in/ ಗೆ ಹೋಗಿ.
“ಮತದಾರರ ಗುರುತಿನ ಚೀಟಿ” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
“Apply for EPIC” ಲಿಂಕ್ ಅನ್ನು ಕ್ಲಿಕ್ ಮಾಡಿ.
“ಫಾರ್ಮ್ 8” ಆಯ್ಕೆಮಾಡಿ.
ನಿಮ್ಮ ಹಳೆಯ ವೋಟರ್ ಐಡಿ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರ ಅಗತ್ಯ ಮಾಹಿತಿಯನ್ನು ನಮೂದಿಸಿ.
ಸ್ಕ್ಯಾನ್ ಮಾಡಿದ ಫೋಟೋ ಮತ್ತು ವಸತಿ ಪುರಾವೆಯನ್ನು ಅಪ್‌ಲೋಡ್ ಮಾಡಿ.
30 ರೂಪಾಯಿ ಶುಲ್ಕವನ್ನು ಪಾವತಿಸಿದ ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಆಫ್‌ಲೈನ್‌ನಲ್ಲೂ ಸಲ್ಲಿಸಬಹುದು ಅರ್ಜಿ
ನಿಮ್ಮ ಹತ್ತಿರದ ಮತಗಟ್ಟೆಗೆ ಹೋಗಿ.
“ಫಾರ್ಮ್ 8” ಪಡೆಯಿರಿ ಮತ್ತು ಅದನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಿ.
30 ರೂಪಾಯಿ ಶುಲ್ಕವನ್ನು ಠೇವಣಿ ಮಾಡಿ.
ಫಾರ್ಮ್ ಅನ್ನು ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸಿದ ನಂತರ 45-60 ದಿನಗಳಲ್ಲಿ ಹೊಸ PVC ಮತದಾರರ ಗುರುತಿನ ಚೀಟಿಯನ್ನು ಪಡೆಯುತ್ತೀರಿ.
PVC ಮತದಾರರ ಗುರುತಿನ ಚೀಟಿಯ ಪ್ರಯೋಜನಗಳು
ಇದು ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಸುರಕ್ಷಿತವಾಗಿದೆ.
ಒಯ್ಯುವುದು ಸುಲಭ.
ಮತದಾರರ ಫೋಟೋ, ಹೆಸರು ಹಾಗೂ QR ಕೋಡ್ ಅನ್ನು ಒಳಗೊಂಡಿರುತ್ತದೆ, ಅದರ ದೃಢೀಕರಣವನ್ನು ಖಚಿತಪಡಿಸಲು ಸುಲಭವಾಗುತ್ತದೆ.
PVC ಮತದಾರರ ಗುರುತಿನ ಚೀಟಿಗೆ ಅಗತ್ಯವಿರುವ ದಾಖಲೆಗಳು
ಹಳೆಯ ಮತದಾರರ ಗುರುತಿನ ಚೀಟಿ
ವಸತಿ ಪುರಾವೆ (ವಿದ್ಯುತ್ ಬಿಲ್, ನೀರಿನ ಬಿಲ್ ಅಥವಾ ಆಧಾರ್ ಕಾರ್ಡ್)
ಗುರುತಿನ ಪುರಾವೆ (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಅಥವಾ ಪ್ಯಾನ್ ಕಾರ್ಡ್)
ನಿಮ್ಮ ಹೆಸರು, ಹುಟ್ಟಿದ ದಿನಾಂಕ ಅಥವಾ ವಿಳಾಸ ಬದಲಾಗಿದ್ದರೆ ಅದನ್ನು ಮೊದಲು ನವೀಕರಿಸಬೇಕಾಗುತ್ತದೆ. ಹಳೆಯ ಮತದಾರರ ಗುರುತಿನ ಚೀಟಿಯನ್ನು ನೀವು ಕಳೆದುಕೊಂಡಿದ್ದರೆ https://eci.gov.in/ ಗೆ ಭೇಟಿ ನೀಡುವ ಮೂಲಕ ನಕಲಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.