ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮತಾಂತರದ ಶಂಕೆ ವ್ಯಕ್ತವಾಗಿದೆ. ಭಗವದ್ಗೀತೆ ಹೋಲುವ ಪುಸ್ತಕವನ್ನೇ ಹೋಲುವ ಪುಸ್ತಕಗಳನ್ನು ಮುದ್ರಿಸಿ, ಮಾರಾಟ ಮಾಡಲಾಗುತ್ತಿದೆ.
ಗೀತೆ ನಿನ್ನ ಜ್ಞಾನ ಅಮೃತ ಎನ್ನುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗಿದೆ. ಪುಸ್ತಕಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಿಂದೂ ಧರ್ಮದ ದೇವರ ಗ್ರಂಥಗಳು ಸರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. ಬೈಬಲ್ ಹಾಗೂ ಕುರಾನ್ ಗ್ರಂಥಗಳೇ ಶ್ರೇಷ್ಠ ಎಂದು ಹೇಳಲಾಗಿದೆ.
ಯಾರು ಹಿಂದೂ ದೇವರನ್ನು ಪೂಜೆ ಮಾಡಬಾರದೆಂದು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದ್ದು, 100 ರೂಪಾಯಿ ಮುಖಬೆಲೆಯ ಪುಸ್ತಕಗಳನ್ನು ಕೇವಲ 10 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಪುಸ್ತಕ ಮಾರುತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತಾಂತರ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.