alex Certify ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಭಾರತೀಯ ಮಸಾಲೆಗಳ ವಿವಾದ; ಆತಂಕದಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಭಾರತೀಯ ಮಸಾಲೆಗಳ ವಿವಾದ; ಆತಂಕದಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟು !

ಭಾರತ, ಮಸಾಲೆಗಳ ದೇಶವೆಂದೇ ಖ್ಯಾತಿ ಪಡೆದಿದೆ. ಭಾರತೀಯ ಮಸಾಲೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದರೆ ಕಳೆದ ಕೆಲವು ದಿನಗಳಿಂದ ಭಾರತೀಯ ಮಸಾಲೆಗಳ ಬಗ್ಗೆಯೇ ಪ್ರಶ್ನೆಗಳೆದ್ದಿವೆ. MDH ಮತ್ತು ಎವರೆಸ್ಟ್ ಮಸಾಲಾ ಬ್ರಾಂಡ್‌ಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಈ ಮಸಾಲೆಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ.

ಈ ನಿಷೇಧದ ಕಿಡಿ ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾವನ್ನು ತಲುಪಿದೆ. ಇದು ಭಾರತದ ಮಸಾಲೆ ವ್ಯಾಪಾರದ ಮೇಲೆ ಪರಿಣಾಮ ಬೀರಿವೆ. ಈ ವಿವಾದದ ನಂತರ ಭಾರತೀಯ ಮಸಾಲೆಗಳ ಇಮೇಜ್ ಹಾಳಾಗುತ್ತಿದೆ. ಅದರ ಪರಿಣಾಮವು ಭಾರತೀಯ ಆರ್ಥಿಕತೆಯ ಮೇಲೆ ಗೋಚರಿಸುತ್ತದೆ.

ಎಷ್ಟು ದೊಡ್ಡದಾಗಿದೆ ಭಾರತದ ಮಸಾಲೆ ಮಾರುಕಟ್ಟೆ ?

2023-24ರ ಆರ್ಥಿಕ ವರ್ಷದಲ್ಲಿ ಭಾರತ ಸುಮಾರು 692.5 ಮಿಲಿಯನ್ ಡಾಲರ್‌ ಮೌಲ್ಯದ ಮಸಾಲೆಗಳನ್ನು ಅಮೆರಿಕ, ಹಾಂಗ್ ಕಾಂಗ್, ಸಿಂಗಾಪುರ, ಆಸ್ಟ್ರೇಲಿಯಾ, ಮಾಲ್ಡೀವ್ಸ್‌ಗಳಿಗೆ ರಫ್ತು ಮಾಡಿದೆ. 2023-24ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ 4.25 ಶತಕೋಟಿ ಡಾಲರ್ ಮೌಲ್ಯದ ಮಸಾಲೆ ರಫ್ತಾಗಿತ್ತು. ಜಾಗತಿಕ ರಫ್ತಿನಲ್ಲಿ ಭಾರತದ ಪಾಲು ಶೇ.12 ರಷ್ಟಿದೆ.

ನಿಷೇಧವನ್ನು ವಿಸ್ತರಿಸಿದರೆ ನಷ್ಟ !

ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಂತಹ ಮಸಾಲೆಗಳ ರಫ್ತಿನ ಮೇಲೆ ಚೀನಾ ಕೂಡ ಕ್ರಮ ಕೈಗೊಂಡರೆ, ಭಾರತವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ನಿಷೇಧದಿಂದಾಗಿಯೇ ಭಾರತದ ಮಸಾಲೆ ರಫ್ತು 2.17 ಬಿಲಿಯನ್ ಡಾಲರ್‌ ನಷ್ಟವನ್ನು ಅನುಭವಿಸಬಹುದು. ಈ ವರದಿಯ ಪ್ರಕಾರ ಯುರೋಪಿಯನ್ ಯೂನಿಯನ್ (EU) ಭಾರತದ ಮಸಾಲೆ ರವಾನೆಗಳನ್ನು ನಿಯಮಿತವಾಗಿ ತಿರಸ್ಕರಿಸುವುದನ್ನು ಮುಂದುವರೆಸಿದರೆ ಸಮಸ್ಯೆ ಹೆಚ್ಚಾಗಬಹುದು. ಭಾರತವು 2.5 ಶತಕೋಟಿ ಡಾಲರ್‌ಗಳಷ್ಟು ಹೆಚ್ಚುವರಿ ನಷ್ಟವನ್ನು ಅನುಭವಿಸಬಹುದು.

ಸಾಂಬಾರ ಪದಾರ್ಥಗಳಷ್ಟೇ ಅಲ್ಲ, ಭಾರತದ ಪ್ರತಿಷ್ಠೆಯೂ ಅಪಾಯದಲ್ಲಿದೆ !

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ರಫ್ತು ಬಹಳ ಮುಖ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವ ಭಾರತ, ರಫ್ತು ಹೆಚ್ಚಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಭಾರತದ ಎರಡು ಜನಪ್ರಿಯ ಮಸಾಲೆ ಬ್ರಾಂಡ್‌ಗಳ ಕೆಲವು ಉತ್ಪನ್ನಗಳ ಗುಣಮಟ್ಟದ ಮೇಲೆ ಎದ್ದಿರುವ ಪ್ರಶ್ನೆಗಳು ಭಾರತದ ರಫ್ತುಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2024ರ ಹಣಕಾಸು ವರ್ಷದಲ್ಲಿ ಭಾರತವು ಸುಮಾರು 700 ಮಿಲಿಯನ್ ಡಾಲರ್‌ ಮೌಲ್ಯದ ಮಸಾಲೆಗಳನ್ನು ರಫ್ತು ಮಾಡಿದೆ. ಮಸಾಲೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿರುವುದರಿಂದ ಈ ವಹಿವಾಟು ಆತಂಕದಲ್ಲಿದೆ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...