ಬಿಜೆಪಿಗೆ ಹರಿದುಬರುತ್ತಿರುವ ದೇಣಿಗೆಯಲ್ಲಿ, 2019-20ರ ವಿತ್ತೀಯ ವರ್ಷದಲ್ಲಿ 6% ಪ್ರತಿಶತ ಹೆಚ್ಚಳ ಕಂಡುಬಂದಿದ್ದು, ತಲಾ 20,000ಕ್ಕಿಂತ ಹೆಚ್ಚಿನ ಮೊತ್ತ ಕೊಟ್ಟವರಿಂದಲೇ ಪಕ್ಷದ ಬೊಕ್ಕಸಕ್ಕೆ 785.77 ಕೋಟಿ ರೂ.ಗಳು ಸಂದಾಯವಾಗಿದೆ. 2018-19ರಲ್ಲಿ ಹರಿದುಬಂದಿದ್ದ 741.99 ಕೋಟಿ ರೂ.ಗಳಿಗಿಂತ ಇದು 6% ಹೆಚ್ಚಾಗಿದೆ.
2019-20ರಲ್ಲಿ ಬಿಜೆಪಿಗೆ ಹರಿದುಬಂದ ಈ ದೇಣಿಗೆಯು ಕಾಂಗ್ರೆಸ್ ಸಿಕ್ಕ ದೇಣಿಗೆಯ 465%ರಷ್ಟಿದೆ. ಇದೇ ವರ್ಷದಲ್ಲಿ ಕಾಂಗ್ರೆಸ್‌ಗೆ ಬಂದ ದೇಣಿಗೆಯು 146.78 ಕೋಟಿ ರೂ.ಗಳಷ್ಟಿತ್ತು. 2018-19ರಲ್ಲಿ 139.01 ಕೋಟಿ ರೂ.ಗಳ ಕೊಡುಗೆ ಬಂದಿತ್ತು.
ಬಿಜೆಪಿ ಚುನಾವಣಾ ಟ್ರಸ್ಟ್‌ಗಳ ಮುಖಾಂತರ ಬಂದ ದೇಣಿಗೆಯು 323.82 ಕೋಟಿ ರೂ.ಗಳಷ್ಟಿದ್ದು, ಇದರ ಪೈಕಿ 217.75 ಕೋಟಿ ರೂ.ಗಳು ಪ್ರುಡೆಂಟ್ ಚುನಾವಣಾ ಟ್ರಸ್ಟ್‌ನಿಂದಲೇ ಬಂದಿದೆ. 45.95 ಕೋಟಿ ರೂ.ಗಳು ಜನಕಲ್ಯಾಣ ಚುನಾವಣಾ ಟ್ರಸ್ಟ್, 30 ಕೋಟಿ ರೂ.ಗಳು ಯೂ ಡೆಮಾಕ್ರಾಟಿಕ್ ಚುನಾವಣಾ ಟ್ರಸ್ಟ್, 9 ಕೋಟಿ ರೂ.ಗಳು ಎಬಿ ಚುನಾವಣಾ ಟ್ರಸ್ಟ್, 3.75 ಕೋಟಿ ರೂ.ಗಳು ಸಮಾಜ್ ಟ್ರಸ್ಟ, 10.12 ಕೋಟಿ ರೂ.ಗಳು ಟ್ರಯಂಫ್ ಟ್ರಸ್ಟ್, ಹಾರ್ಮೋನಿ ಟ್ರಸ್ಟ್‌ನಿಂದ 5.25 ಕೋಟಿ ರೂ.ಗಳು ಹಾಗೂ ಜನಹಿತ ಟ್ರಸ್ಟ್‌ನಿಂದ 2 ಕೋಟಿ ರೂ.ಗಳು ಪಕ್ಷದ ಬೊಕ್ಕಸ ಸೇರಿವೆ.
ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?
ಟಾಟಾ ಸಮೂಹದ ಪ್ರೊಗ್ರೆಸಿವ್ ಚುನಾವಣಾ ಟ್ರಸ್ಟ್ ಈ ಬಾರಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಘೊಷಿಸಲ್ಪಟ್ಟ ದೇಣಿಗೆದಾರರ ಪಟ್ಟಿಯಲ್ಲಿ ಇಲ್ಲ. 2018-19ರಲ್ಲಿ ಇದೇ ಟ್ರಸ್ಟ್‌ನಿಂದ ಬಿಜೆಪಿ 472 ಕೋಟಿ ರೂ.ಗಳು ಹಾಗೂ ಕಾಂಗ್ರೆಸ್ 55 ಕೋಟಿ ರೂ.ಗಳು ಸೇರಿಕೊಂಡಿತ್ತು.
ಕೊರೊನಾ ಲಸಿಕೆ ಪಡೆಯುವುದಿಲ್ಲವೆಂದು ಹೇಳಿದ್ದ ಬಾಬಾ ರಾಮ್ ದೇವ್ ʼಯೂ ಟರ್ನ್ʼ
ಇದೇ ವೇಳೆ ಚುನಾವಣಾ ಬಾಂಡ್‌ಗಳ ಮುಖಾಂತರ ಎಷ್ಟು ದುಡ್ಡು ಬಂದಿದೆ ಎಂಬುದನ್ನು ಬಿಜೆಪಿ ಇನ್ನೂ ಆಡಿಟ್ ವರದಿಯನ್ನು ಸಲ್ಲಿಸಿಲ್ಲ. ಸಾಂಕ್ರಮಿಕ ಕಾರಣದಿಂದಾಗಿ ಈ ಸಂಬಂಧ ಎಲ್ಲ ಪಕ್ಷಗಳಿಗೂ ಇರುವ ಡೆಡ್‌ಲೈನ್ ಅನ್ನು ಜೂನ್ 30, 2021ರವರೆಗೂ ವಿಸ್ತರಿಸಲಾಗಿದೆ.