
ಬೆಂಗಳೂರು: ರೈತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದಿಂದ ಅಭೂತಪೂರ್ವ ಕೊಡುಗೆ ಘೋಷಿಸಲಾಗಿದೆ. 2025- 26 ನೇ ಸಾಲಿನ ಆಯವ್ಯದಲ್ಲಿ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ.
ಡಿಜಿಟಲ್ ಕೃಷಿ ಸೇವಾ ಕೇಂದ್ರ ಸ್ಥಾಪನೆ
ತೊಗರಿ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸಲು ಕ್ರಮ
ಸಮಗ್ರ ಮಳೆಯಾಶ್ರಿತ ಕೃಷಿ ನೀತಿಯ ಅನುಷ್ಠಾನ
ರಾಜ್ಯದ 10 ಕೃಷಿ ವಲಯಗಳ ಮರು ವಿಶ್ಲೇಷಣೆ ಮತ್ತು ಮರು ವಿಂಗಡಣೆಗೆ ತಜ್ಞರ ಸಮಿತಿ ರಚನೆ
ಕೃಷಿ ಇಲಾಖೆಯ 58 ಪ್ರಯೋಗಾಲಯಗಳ ಬಲವರ್ಧನೆ
ಸಕ್ಕರೆ ಕಾರ್ಖಾನೆಗಳ ಸಹಾಯೋಗದೊಂದಿಗೆ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆಯಿಂದ ಮಾದರಿ ಕೃಷಿ ಕ್ಷೇತ್ರವನ್ನಾಗಿ ಪರಿವರ್ತಿಸಲಾಗುವುದು.
ಕೃಷಿ ನವೋದ್ಯಮಗಳಿಂದ ತಯಾರಿಸಲ್ಪಟ್ಟ ಜೈವಿಕ ಕೃಷಿ ಉತ್ಪನ್ನಗಳಿಗೆ ಉತ್ತೇಜನ
ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಕೃಷಿ ಭಾಗ್ಯ ಯೋಜನೆ ಮುಂದುವರಿಕೆ
20 ಕೋಟಿ ರೂ. ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್ ಸ್ಥಾಪನೆ
ರೈತ ಸಮೃದ್ಧಿ ಯೋಜನೆಯಲ್ಲಿ ಸಮಗ್ರ ಕೃಷಿ ಪದ್ಧತಿ, ಮಾದರಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು
ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕನ್ನಾಗಿ ಪರಿವರ್ತಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 18004253553 ಗೆ ಕರೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.