ಬೆಂಗಳೂರು: ಮುಖ್ಯಮಂತ್ರಿ / ಉಪ ಮುಖ್ಯಮಂತ್ರಿ / ಸಚಿವರು / ವಿಧಾನ ಸಭೆ / ವಿಧಾನ ಪರಿಷತ್ / ಲೋಕಸಭೆ/ ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಕಾರ್ಯಾಲಯ, ಸಚಿವರು ಸ್ನಾನಮಾನ ಪಡೆದ ಪ್ರಾಧಿಕಾರಿಗಳ ಆಪ್ತ ಶಾಖೆಗಳಲ್ಲಿ ಮತ್ತು ಕೆಲವು ಆಯೋಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರಿ ಆದೇಶದನ್ವಯ ಕರ್ನಾಟಕ ನಾಗರಿಕ ಸೇವೆಗಳು(ಪರಿಷ್ಕೃತ ವೇತನ) ನಿಯಮಗಳು, 2018ರನ್ವಯ ಸಂಚಿತ ವೇತನವನ್ನು ನಿಗದಿಪಡಿಸಲಾಗಿರುತ್ತದೆ.
ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳು ಪರಿಷ್ಕೃತ ವೇತನ ನಿಯಮಗಳು 2024ರ ಅನುಸಾರ ಸಂವಾದಿ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ವೇತನ ಹಂತವನ್ನು ದಿನಾಂಕ:01.11.2024ರಿಂದ ಜಾರಿಗೆ ಬರುವಂತೆ ಸಂಚಿತ ವೇತನವನ್ನಾಗಿ ಪರಿಷ್ಕರಿಸಿ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ ಆದೇಶಿಸಿದೆ.