alex Certify ಹಾಲು ಒಕ್ಕೂಟಗಳ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲು ಒಕ್ಕೂಟಗಳ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಳ ಮತ್ತು 13 ಒಕ್ಕೂಟಗಳ ಗುತ್ತಿಗೆ ನೌಕರರಿಗೆ ಕೈಗಾರಿಕಾ ನ್ಯಾಯ ಮಂಡಳಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಶಾಶ್ವತ ಸಿಬ್ಬಂದಿಗೆ ನೀಡುವ ವೇತನ ಮತ್ತು ಸೌಲಭ್ಯಗಳನ್ನು ಗುತ್ತಿಗೆ ನೌಕರರಿಗೂ ನೀಡುವಂತೆ ನ್ಯಾಯಮಂಡಳಿ ಆದೇಶಿಸಿದೆ.

ಈ ಮೂಲಕ 18 ವರ್ಷಗಳಿಂದ ಕಾರ್ಮಿಕರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕೆಎಂಎಫ್ ಮತ್ತು ಕೆಎಂಎಫ್ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುವ ಪಶು ಆಹಾರ ಘಟಕ, ಹಾಲು ಉತ್ಪಾದನಾ ಘಟಕ ಹಾಗೂ ಹಾಲು ಒಕ್ಕೂಟಗಳಲ್ಲಿನ ಗುತ್ತಿಗೆ ನೌಕರರ ಪೈಕಿ ನ್ಯಾಯಾಧೀಕರಣ ಮುಂದೆ ಹೋರಾಟ ಮಾಡಿದವರಿಗೆ ಈ ಸೌಲಭ್ಯ ಸಿಗಲಿದೆ. ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್, ಕೆಎಂಎಫ್ ನೌಕರರ ಸಂಘ ಸತತ ಹೋರಾಟ ನಡೆಸಿದ್ದವು.

ಸದ್ಯ ನ್ಯಾಯಮಂಡಳಿ ಮುಂದೆ ಹೋರಾಟ ಮಾಡಿದ ಸುಮಾರು 2000 ಜನರ ಪರವಾಗಿ ಈ ತೀರ್ಪು ಬಂದಿದೆ. ಉಳಿದ ನೌಕರರು ಈ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ಕಾನೂನು ಹೋರಾಟ ಮಾಡಿದರೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

ಕೈಗಾರಿಕಾ ನ್ಯಾಯ ಮಂಡಳಿ ತೀರ್ಪಿನ ವಿರುದ್ಧ ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಹೈಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...