‘ಶೇಖ್ ಹಸೀನಾ’ ರಾಜೀನಾಮೆ ಬಳಿಕವೂ ಬಾಂಗ್ಲಾದೇಶ ಉದ್ವಿಗ್ನಗೊಂಡಿದ್ದು, ‘ಅವಾಮಿ ಲೀಗ್’ ಪಕ್ಷದ ನಾಯಕನನ್ನು ಪ್ರತಿಭಟನಾಕಾರರು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದಾರೆ.
ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ರಾಜಕೀಯ ಪಕ್ಷದ ಮುಖ್ಯಸ್ಥರು ಪ್ರಸ್ತುತ ನವದೆಹಲಿಯಲ್ಲಿದ್ದಾರೆ ಮತ್ತು ಯುಕೆಯಿಂದ ಆಶ್ರಯ ಕೋರಿದ್ದಾರೆ.
ಏತನ್ಮಧ್ಯೆ, ಅವರ ಪಕ್ಷದ ನಾಯಕರ ಮೇಲೆ ಪ್ರತಿಭಟನಾಕಾರರು ಭಾರಿ ಹಿಂಸೆ ನೀಡುತ್ತಿದ್ದಾರೆ. ಕಂಡ ಕಂಡಲ್ಲಿ ಅವಾಮಿ ಲೀಗ್ ರಾಜಕೀಯ ಪಕ್ಷದ ನಾಯಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅವಾಮಿ ಲೀಗ್’ ಪಕ್ಷದ ನಾಯಕನೋರ್ವನನ್ನು ಪ್ರತಿಭಟನಾಕಾರರು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾರೆ.
ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು, ಮಂಗಳವಾರ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಪ್ರಾರಂಭಿಸಲಾಗಿದೆ, ನಂತರ ಎಲ್ಲಾ ಸೇವೆಗಳು ಸಾಮಾನ್ಯವಾಗಿ ಪುನರಾರಂಭಗೊಳ್ಳುತ್ತವೆ ಎಂದು ಬಾಂಗ್ಲಾದೇಶ ಸೇನೆ ತಿಳಿಸಿದೆ.