alex Certify BIG NEWS: ಕಲುಷಿತ ನೀರು ಸೇವನೆ: 25ಕ್ಕೂ ಹೆಚ್ಚು ಜನರು ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲುಷಿತ ನೀರು ಸೇವನೆ: 25ಕ್ಕೂ ಹೆಚ್ಚು ಜನರು ಅಸ್ವಸ್ಥ

ದಾವಣಗೆರೆ: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದಲ್ಲಿ ನಡೆದಿದೆ.

ಅಸ್ವಸ್ಥರಲ್ಲಿ 14 ಜನರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಹಾಗೂ 6 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರನ್ನು ಭದ್ರಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲುಷಿತ ನೀರಿನಿಂದ ಆರಂಭದಲ್ಲಿ ನಾಲ್ವರಲ್ಲಿ ವಾಂತಿ-ಬೇಧಿ ಶುರುವಾಗಿದೆ. ಬಳಿಕ ಗ್ರಾಮದ ಹಲವರಲ್ಲಿ ವಾಂತಿ-ಬೇಧಿ ಶುರುವಾಗಿದೆ. ಗ್ರಾಮಕ್ಕೆ ಚನ್ನಗಿರಿ ಇಒ ಬಿ.ಕೆ.ಉತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...