ಒತ್ತಡದ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮಗಳಿಂದ ವಿವಾಹಿತ ಪುರುಷರಿಗೆ ದೈಹಿಕ ದೌರ್ಬಲ್ಯ ಕಾಡಬಹುದು. ಅಂತಹ ಸಂದರ್ಭಗಳಲ್ಲಿ ಕೆಲವೊಂದು ನಿರ್ದಿಷ್ಟ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದ ಶರೀರ ಸದೃಢವಾಗುತ್ತದೆ. ಮಾನಸಿಕವಾಗಿಯೂ ನೀವು ಸಂತೋಷವಾಗಿರಬಹುದು.
ಆರೋಗ್ಯ ತಜ್ಞರ ಪ್ರಕಾರ, ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಅನೇಕ ಆಹಾರಗಳಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಕಂಡುಬರುತ್ತದೆ. ಇದು ಮದುವೆಯ ನಂತರ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.
ಅಶ್ವಗಂಧ: ಇದು ಅತ್ಯಂತ ಪ್ರಾಚೀನ ಔಷಧ. ಇದರ ಸೇವನೆಯು ವಿಶೇಷವಾಗಿ ಶುಕ್ರ ಧಾತುವಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಶ್ವಗಂಧವು ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಹಾಲಿನೊಂದಿಗೆ ಸೇವಿಸಿ.
ಒಣ ಖರ್ಜೂರ: ಒಣ ಖರ್ಜೂರವನ್ನು ಹಾಲಿನಲ್ಲಿ ಕುದಿಸಿಕೊಂಡು ರಾತ್ರಿ ಸೇವನೆ ಮಾಡುವುದರಿಂದ ಲೈಂಗಿಕ ಬಯಕೆ ಮತ್ತು ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ನೀವು ಪ್ರತಿದಿನ 100 ಗ್ರಾಂ ಒಣ ಖರ್ಜೂರವನ್ನು ಸೇವಿಸಬಹುದು. ಇದಲ್ಲದೇ ಖರ್ಜೂರವನ್ನು ಕೂಡ ಸೇವಿಸಬಹುದು.
ನೆಲ್ಲಿಕಾಯಿ: ನೆಲ್ಲಿಕಾಯಿ ಸೇವನೆಯಿಂದ ಕಣ್ಣು ಮತ್ತು ಕೂದಲಿಗೆ ಲಾಭವಾಗುತ್ತದೆ. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕೆಂದರೆ ನೆಲ್ಲಿಕಾಯಿಯನ್ನು ಸೇವನೆ ಮಾಡಿ. ನೆಲ್ಲಿಕಾಯಿ ಪುಡಿಗೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಂಡು ದಿನಕ್ಕೆ ಎರಡು ಬಾರಿ ತಿನ್ನಬೇಕು.
ಈರುಳ್ಳಿ ಮತ್ತು ಬೆಳ್ಳುಳ್ಳಿ : ಪುರುಷರ ತ್ರಾಣವನ್ನು ಹೆಚ್ಚಿಸುವಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಎರಡು-ಮೂರು ಎಸಳು ಬೆಳ್ಳುಳ್ಳಿಯನ್ನು ತಿನ್ನಬೇಕು. ಬಿಳಿ ಈರುಳ್ಳಿಯನ್ನು ಸೇವಿಸುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ.