ರಾಗಿ ತಿಂದವ ರೋಗ ಮುಕ್ತ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ, ನಿತ್ಯ ರಾಗಿ ಗಂಜಿ, ಮುದ್ದೆ ತಿಂದವನ ಬಳಿ ರೋಗಗಳು ಸಮೀಪಿಸುವುದಿಲ್ಲ. ಅದರಲ್ಲೂ ರಾಗಿ ಮಾಲ್ಟ್ ಸೇವನೆಯಿಂದ ದೇಹಕ್ಕೆ ಹಲವು ಉಪಯೋಗಗಳಿವೆ.
ರಾಗಿ ಹಿಟ್ಟನ್ನು ಅಂಗಡಿಯಿಂದ ತರುವ ಬದಲು ರಾಗಿ ತಂದು ನೀವೇ ಮನೆಯಲ್ಲಿ ಹಿಟ್ಟು ಮಾಡಿಕೊಳ್ಳುವುದು ಒಳ್ಳೆಯದು. ನೀರು ಕುದಿಸಿ ರಾಗಿ ಹಿಟ್ಟು ಹಾಕಿ ಕಲಕಿ, ಗಂಟುಗಳಾಗದಂತೆ ನೋಡಿಕೊಳ್ಳಿ. ಬೆಲ್ಲ, ಏಲಕ್ಕಿ, ಲವಂಗ ಹಾಕಿ ಚೆನ್ನಾಗಿ ಕುದಿಸಿ.
ಕೆಳಗಿಳಿಸುವ ಮುನ್ನ ಗೋಡಂಬಿ ಪುಡಿ ಉದುರಿಸಿ, ಇದನ್ನು ಬೆಳಿಗ್ಗೆ ಸಂಜೆ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಸಕ್ಕರೆ ಕಾಯಿಲೆಗೂ ಇದು ಬಹಳ ಒಳ್ಳೆಯದು. ದೇಹಕ್ಕೆ ಶಕ್ತಿ ಕೊಡುವ ರಾಗಿ ದೇಹ ತೂಕವನ್ನು ಹೆಚ್ಚಿಸುವುದಿಲ್ಲ, ಬದಲಾಗಿ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.
ಮಕ್ಕಳಿಗೆ ನಿತ್ಯ ಇದನ್ನು ಕುಡಿಯಲು ಕೊಡುವುದು ಬಹಳ ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ ಇವು ಪಿತ್ತ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗಾಗಿ ನಿತ್ಯ ನಿಮ್ಮ ಆಹಾರದಲ್ಲಿ ರಾಗಿ ಬಳಸಿ.