ತುಳಸಿ ಗಿಡ ಒಂದು ಔಷಧೀಯ ಸಸ್ಯವಾಗಿದೆ, ಇದನ್ನು ಆಯುರ್ವೇದದ ಚಿಕಿತ್ಸೆಗೆ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುವ ಸಂಭವವಿದೆ.
ಹಾಗಾದ್ರೆ ತುಳಸಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಎಂಬುದನನ್ನು ತಿಳಿಯಿರಿ.
*ತುಳಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಔಷಧದ ಜೊತೆ ತುಳಸಿ ಸೇವಿಸಿದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ಸಮಸ್ಯೆ ಉಂಟಾಗಬಹುದು.
*ಗರ್ಭಿಣಿಯರು ತುಳಸಿಯನ್ನು ಸೇವಿಸಬಾರದು. ಇದರಲ್ಲಿರುವ ಅಂಶ ಅವಧಿಗೆ ಕಾರಣವಾಗಬಹುದು. ಇದರಿಂದ ಗರ್ಭಪಾತವಾಗುವ ಸಂಭವವಿದೆ.
*ತುಳಸಿ ಎಲೆಗಳನ್ನು ಅತಿಯಾಗಿ ಸೇವಿಸಿದರೆ ರಕ್ತ ತೆಳುವಾಗತ್ತದೆ. ಇದರಿಂದ ರಕ್ತ ದುರ್ಬಲಗೊಳ್ಳಬಹುದು.
* ತುಳಸಿ ಶಾಖ ಉತ್ಪತ್ತಿ ಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿ ಸುಡುವ ವೇದನೆ ಕಾಡಬಹುದು.