ಬೇರೆ ಏನು ತಿಂದ್ರೂ ಅನ್ನ ಊಟ ಮಾಡಿದ ಹಾಗೆ ಆಗಲ್ಲ ಎನ್ನುವವರಿದ್ದಾರೆ. ಮೂರು ಹೊತ್ತು ಅನ್ನ ತಿನ್ನುವ ಜನರೂ ನಮ್ಮಲ್ಲಿದ್ದಾರೆ. ಕೆಲವರಿಗೆ ಅನ್ನವೆಂದ್ರೆ ಪ್ರಾಣ. ಆದ್ರೆ ಪ್ರತಿದಿನ ಅನ್ನ ತಿನ್ನುವುದ್ರಿಂದ ಅನೇಕ ರೋಗಗಳು ಕಾಡುತ್ತವೆಯಂತೆ. ಹೊವಾರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಸಂಶೋಧನಾ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಪ್ರತಿದಿನ ಪಾಲಿಶ್ ಮಾಡಿದ ಅನ್ನ ಸೇವನೆ ಮಾಡುವುದ್ರಿಂದ ಅನೇಕ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿದೆಯಂತೆ.
ಒಂದು ಪ್ಲೇಟ್ ಅನ್ನ 10 ಚಮಚ ಸಕ್ಕರೆಗೆ ಸಮ. ಇದನ್ನು ಪ್ರತಿದಿನ ಸೇವನೆ ಮಾಡುವುದ್ರಿಂದ ಮಧುಮೇಹ ಸಮಸ್ಯೆ ಹೆಚ್ಚಾಗುತ್ತದೆ.
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುವುದ್ರಿಂದ ತೂಕ ಹೆಚ್ಚಾಗುತ್ತದೆ.
ಅನ್ನದಲ್ಲಿ ವಿಟಮಿನ್ ‘ಸಿ’ ಯಿದ್ದು ಇದು ಮೂಳೆಗಳಿಗೆ ಯಾವುದೇ ರೀತಿಯ ಶಕ್ತಿ ನೀಡುವುದಿಲ್ಲ.
ಅನ್ನ ರುಚಿಯಿಲ್ಲದ ಕಾರಣ ಇದ್ರ ಜೊತೆ ಜನರು ರುಚಿಕರ ಮಸಾಲೆ ಪದಾರ್ಥವನ್ನು ಸೇವನೆ ಮಾಡ್ತಾರೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ.