ಜೀರಿಗೆ ಅಡುಗೆಗೆ ರುಚಿ ಕೊಡುವುದರೊಂದಿಗೆ ಇನ್ನು ಅನೇಕ ಲಾಭಗಳನ್ನು ನೀಡುತ್ತದೆ.
ಅದರಲ್ಲೂ ಬಿಸಿನೀರಿಗೆ ಸ್ವಲ್ಪ ಜೀರಿಗೆ ಹಾಕಿ ಕುದಿಸಿ ಸೋಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ಕೊಬ್ಬು ಮತ್ತು ಕಾರ್ಬೋ ಹೈಡ್ರೇಟ್ಸ್ ಗಳು ಕರಗುತ್ತದೆ. ಯಕೃತ್ ಗೂ ಹಲವಾರು ರೀತಿಯ ಲಾಭಗಳಾಗುತ್ತವೆ.
ಜೀರಿಗೆ ನೀರು, ದೇಹದಲ್ಲಿ ಇರುವ ಹಾನಿಕಾರಕ ಕಲ್ಮಶವನ್ನು ಹೊರ ಹಾಕಿ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಜೀರಿಗೆಯಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿದ್ದು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ ಹಿಮೋಗ್ಲೋಬಿನ್ ಮಟ್ಟವನ್ನು ಏರಿಸುತ್ತದೆ. ಹೊಟ್ಟೆಯಲ್ಲಿ ಜಂತು ಹುಳುಗಳು ಚುಚ್ಚುತ್ತಿದ್ದರೆ ಜೀರಿಗೆ ನೀರನ್ನು ಕುದಿಸಿ, ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬೇಕು.
ಬಾಯಲ್ಲಿ ಉಷ್ಣ ಗುಳ್ಳೆಗಳು ಆಗಿದ್ದರೆ, ಹಸಿ ಜೀರಿಗೆಯನ್ನು ಅಗಿದು ಬಾಯಿಯಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.