ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡದಿಂದಾಗಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ದಿನವಿಡಿ ದುಡಿದು ಸುಸ್ತಾಗಿದ್ದರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. ನಿದ್ರೆ ಬರದ ಕಾರಣ ಸುಸ್ತು ಮತ್ತಷ್ಟು ಹೆಚ್ಚಾಗುತ್ತದೆ. ಅವಶ್ಯಕತೆಗೆ ತಕ್ಕಷ್ಟು ನಿದ್ರೆ ಬರದಿರಲು ಕಾರಣ ರಾತ್ರಿ ನಾವು ಸೇವನೆ ಮಾಡುವ ಆಹಾರವೂ ಒಂದು ಕಾರಣ. ಸೂಕ್ತ ನಿದ್ರೆಗಾಗಿ ರಾತ್ರಿ ನಾವು ಸೂಕ್ತ ಆಹಾರವನ್ನು ಸೇವಿಸಬೇಕಾಗುತ್ತದೆ.
ಬಾಳೆಹಣ್ಣು ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ನಿಂದ ಸಮೃದ್ಧವಾಗಿದೆ. ಇದು ಶರೀರಕ್ಕೆ ಟ್ರಿಪ್ಟೊಫಾನ್ ಒದಗಿಸುವ ಕೆಲಸ ಮಾಡುತ್ತದೆ. ಇದು ಮಿದುಳಿಗೆ ವಿಶ್ರಾಂತಿ ನೀಡುವ ಜೊತೆಗೆ ನಿದ್ರೆ ಬರಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಮ್ಯಾಗ್ನೀಸಿಯಂ ಸ್ನಾಯುಗಳಿಗೆ ಆರಾಮ ನೀಡುತ್ತದೆ.
ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಒಳ್ಳೆಯದು. ಇದ್ರಲ್ಲಿರುವ ಕ್ಯಾಲ್ಸಿಯಂ ನಿದ್ರೆಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತದೆ. ನಿದ್ರಾ ಹೀನತೆ ಸಮಸ್ಯೆಯಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿದು ಮಲಗುವುದು ಉತ್ತಮ.
ಬಾದಾಮಿ ತಿನ್ನುವುದು ಎಲ್ಲರಿಗೂ ಇಷ್ಟ. ಅದ್ರಲ್ಲಿರುವ ಕೊಬ್ಬು, ಮ್ಯಾಗ್ನೀಸಿಯಂ, ಕಬ್ಬಿಣ ಸುಖ ನಿದ್ರೆಗೆ ಸಹಾಯ ಮಾಡುತ್ತವೆ. ರಾತ್ರಿ ಬಾದಾಮಿಯನ್ನು ಅವಶ್ಯವಾಗಿ ತಿನ್ನಿ. ಅದ್ರ ಜೊತೆ ಹಾಲು ಹಾಗೂ ಜೇನು ತುಪ್ಪವನ್ನೂ ತೆಗೆದುಕೊಳ್ಳಬಹುದು.
ಜೇನುತುಪ್ಪದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಫಂಗಲ್ ಗುಣವಿರುತ್ತದೆ. ಹಾಗಾಗಿ ರಾತ್ರಿ ಡಯೆಟ್ ನಲ್ಲಿ ಜೇನುತುಪ್ಪವಿರಲಿ.