ದಿನಕ್ಕೊಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬ ಉಕ್ತಿಯನ್ನು ಎಲ್ಲರೂ ಕೇಳಿರುತ್ತೀರಿ. ಈ ಮಾತೇ ಸಾಕು ಸೇಬಿನ ಮಹತ್ವ ತಿಳಿಸಲು.
ಸೇಬುಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಕೆಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಬಹುತೇಕ ಎಲ್ಲಾ ಹಣ್ಣುಗಳ ಬೀಜಗಳಲ್ಲಿ ಪೋಷಕಾಂಶಗಳಿರುತ್ತವೆ. ಆದರೆ ಸೇಬಿನ ಬೀಜ ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ಈಡಾಗಬಹುದು.
ಒಂದು ವೇಳೆ ತಿನ್ನುವಾಗ ಹಲ್ಲಿಗೆ ಆ ಬೀಜ ಸಿಕ್ಕರೆ ತಕ್ಷಣವೇ ಅದನ್ನು ತೆಗೆದು ಎಸೆಯಿರಿ. ಸೇಬುಹಣ್ಣಿನ ಒಂದೆರಡು ಬೀಜಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಭಾವ ಬೀರದು. ಆದರೆ 5 ಗ್ರಾಮ್ ಗಿಂತ ಅಧಿಕ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಸಮಸ್ಯೆಗಳು ಬರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಏಕೆಂದರೆ ಈ ಬೀಜಗಳಲ್ಲಿ ಅಮೆಡಾಲಿನ ಎಂಬ ಪದಾರ್ಥವಿದ್ದು ಇದು ಉಸಿರಾಟದ ತೊಂದರೆ ತಂದೊಡ್ಡಬಹುದು ಎನ್ನಲಾಗಿದೆ.
ಅಷ್ಟೇ ಅಲ್ಲದೆ ತಲೆನೋವು, ವಾಂತಿ, ಬಲಹೀನತೆ ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬರಬಹುದು ಎನ್ನಲಾಗಿದೆ. ಹಾಗಾಗಿ ಮಕ್ಕಳು ಇದನ್ನು ಸೇವಿಸಲೇಬಾರದು. ಹಾಗಾಗಿ ಮಕ್ಕಳಿಗೆ ಸೇಬು ತಿನ್ನಲು ಕೊಡುವಾಗ ಎಚ್ಚರ ವಹಿಸಿ.