ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ.
ಬಾಳೆ ಹಣ್ಣು : ಬಾಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಕ್ಯಾಲ್ಷಿಯಮ್ ಮತ್ತು ಮ್ಯಾಗ್ನೀಶಿಯಮ್ ಪ್ರಮಾಣದಲ್ಲಿ ಏರುಪೇರಾಗುತ್ತದೆ.
ಹಾಲು : ಖಾಲಿ ಹೊಟ್ಟೆಯಲ್ಲಿ ಹಾಲನ್ನು ಕುಡಿಯುವುದರಿಂದ ಇದರಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಪ್ರೋಟೀನ್ ಹೊಟ್ಟೆಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಕಫ ಆಗುವ ಸಂಭವ ಕೂಡ ಹೆಚ್ಚು.
ಗೆಣಸು : ಗೆಣಸಿನ ಗಡ್ಡೆಯಲ್ಲಿ ಟ್ಯಾನಿನ್ ಮತ್ತು ಪ್ಯಾಕ್ಟೀನ್ ಇರುವುದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆನೋವು ಬರಬಹುದು.
ಟೊಮೆಟೋ : ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಸೇವನೆ ಒಳ್ಳೆಯದಲ್ಲ. ಇದರಲ್ಲಿನ ಎಸಿಡ್ ಅಂಶ ಹೊಟ್ಟೆಗೆ ಹಾನಿಯುಂಟು ಮಾಡುವುದಲ್ಲದೇ ಸ್ಟೋನ್ ಸಮಸ್ಯೆ ಕೂಡ ಉಂಟಾಗಬಹುದು.
ಸಕ್ಕರೆ : ಖಾಲಿ ಹೊಟ್ಟೆಗೆ ಸಿಹಿ ವರ್ಜ್ಯ. ಇದರಿಂದ ಸಕ್ಕರೆ ಖಾಯಿಲೆ ಮತ್ತು ಕಣ್ಣಿನ ತೊಂದರೆ ಉಂಟಾಗುವ ಸಂಭವ ಹೆಚ್ಚು.
ಟೀ : ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಒಳಿತಲ್ಲ. ಇದರಲ್ಲಿ ಎಸಿಡ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಎಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು.