ಬಿಸಿಲ ಝಳದಿಂದ ತಾತ್ಕಾಲಿಕ ಮುಕ್ತಿ ಹೊಂದಲು ಕಬ್ಬಿನ ಹಾಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟಾಸಿಯಂ, ಮೆಗ್ನೀಸಿಯಂ ಮೊದಲಾದ ಪೋಷಕಾಂಶಗಳಿವೆ.
ಇದನ್ನು ಕುಡಿಯುವುದರಿಂದ ಕೆಲವೇ ನಿಮಿಷಗಳಲ್ಲಿ ನೀವು ಕಳೆದುಕೊಂಡ ದೇಹದ ಶಕ್ತಿಯನ್ನು ಮರಳಿ ಪಡೆಯಬಹುದು. ಏಕೆಂದರೆ ಇದರಲ್ಲಿರುವ ಸುಕ್ರೋಸ್ ಎಂಬ ಅಂಶ ಸಣ್ಣ ಅವಧಿಯನ್ನು ನಿಮ್ಮ ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ.
ಲಿವರ್ ಸಮಸ್ಯೆಗಳಿಗೆ ಇದು ಅತ್ಯುತ್ತಮ ಎನ್ನಲಾಗಿದೆ. ಇದೇ ಕಾರಣಕ್ಕೆ ಕಾಮಾಲೆ ರೋಗ ಬಂದವರಿಗೆ ಕಬ್ಬಿನ ರಸ ಕುಡಿಸಿ ಎಂದು ಹೇಳುವುದು. ಇದರಲ್ಲಿ ಸಾಕಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್ ಇದ್ದು ಲಿವರ್ ಸೋಂಕು ಆಗದಂತೆ ನೋಡಿಕೊಳ್ಳುತ್ತದೆ.
ಹಲ್ಲಿನ ಸಮಸ್ಯೆ ನಿವಾರಿಸಲೂ ಇದು ಸಹಕಾರಿ. ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಕಿಡ್ನಿ ಸಮಸ್ಯೆ ನಿಮ್ಮ ಸಮೀಪ ಸುಳಿಯುವುದಿಲ್ಲ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುವ ಗುಣವೂ ಇದಕ್ಕಿದೆ.