ಗರ್ಭ ಧರಿಸಿದ ನಂತ್ರ ಮತ್ತು ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದರಿಂದಾಗಿ ಅನೇಕ ಸಮಸ್ಯೆ ಎದುರಾಗುತ್ತದೆ. ಹೆರಿಗೆಯ ನಂತರವೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಓಂ ಕಾಳು ನೆರವಾಗಲಿದೆ. ಅಜ್ವೈನದ ನೀರಿನಲ್ಲಿ ಬಹಳಷ್ಟು ಆಂಟಿ-ಆಕ್ಸಿಡೆಂಟ್ ಅಂಶಗಳಿದ್ದು, ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
ಹೆರಿಗೆಯ ನಂತರ, ಮಹಿಳೆಯರು ಗ್ಯಾಸ್ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಅಜೈನ್ ನೀರನ್ನು ಸೇವಿಸಬಹುದು. ಇದು ಹೊಟ್ಟೆ ನೋವು, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಹೆರಿಗೆಯ ನಂತ್ರ ಅನೇಕ ಮಹಿಳೆಯರ ತೂಕ ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಅಜ್ವೈನದ ನೀರು, ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಚಯಾಪಚಯವನ್ನು ಇದು ಸುಲಭಗೊಳಿಸುತ್ತದೆ.
ಹೆರಿಗೆಯ ಹಲವು ತಿಂಗಳುಗಳ ನಂತರ ಮಹಿಳೆಯರಿಗೆ ಮತ್ತೆ ಮುಟ್ಟು ಶುರುವಾಗುತ್ತದೆ. ಈ ಸಮಯದಲ್ಲಿ ಮಹಿಳೆಯರಿಗೆ ಸೊಂಟ ಮತ್ತು ಕೆಳ ಹೊಟ್ಟೆಯಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳುತ್ತದೆ. ಆಗ ಅಜ್ವೈನದ ನೀರು ಕುಡಿದ್ರೆ ಈ ಸಮಸ್ಯೆ ಕಡಿಮೆ ಮಾಡಬಹುದು.