alex Certify ಇತಿಮಿತಿಯಾದ ಹಸಿಮೆಣಸು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಮಿತಿಯಾದ ಹಸಿಮೆಣಸು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ

ಊಟಕ್ಕೆ ಹಸಿ ಮೆಣಸು ಕಚ್ಚಿಕೊಳ್ಳುವುದೆಂದರೆ ನಿಮಗೂ ಇಷ್ಟವೇ…? ಇತಿಮಿತಿಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹಸಿ ಮೆಣಸನ್ನು ಕ್ರಮಪ್ರಕಾರವಾಗಿ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕೊಬ್ಬು ಹಾಗೂ ಕ್ಯಾಲೊರಿಗಳನ್ನು ಕಡಿಮೆ ಮಾಡಿ ದೇಹಾರೋಗ್ಯವನ್ನು ಕಾಪಾಡುತ್ತದೆ.

ಹಸಿಮೆಣಸಿಗೆ ಕ್ಯಾನ್ಸರ್ ಬೆಳೆಯುವ ಮತ್ತು ಹರಡುವುದನ್ನು ತಡೆಯುವ ಶಕ್ತಿ ಇದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಸಿಮೆಣಸಿನೊಂದಿಗೆ ಜೀರಿಗೆ ಮತ್ತು ಅರಶಿನ ಬೆರೆಸಿ ಸೇವಿಸುವುದರಿಂದ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚುತ್ತವೆ.

ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಖಿನ್ನತೆಯಂಥ ಸಮಸ್ಯೆಗಳು ದೂರವಾಗುತ್ತದೆ. ಸಂಧಿವಾತ, ತಲೆನೋವು ಮತ್ತು ವಾಕರಿಕೆಯಂಥ ರೋಗಗಳ ನಿವಾರಣೆಗೆ ಆಯುರ್ವೇದದಲ್ಲೂ ಈ ಮಸಾಲೆಗಳನ್ನು ಬಳಸುವಂತೆ ಸೂಚಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: