ಕೊತ್ತಂಬರಿ ಬೀಜ ಸಾಂಬಾರಿಗೆ ರುಚಿ ಕೊಡುವುದು ಮಾತ್ರವಲ್ಲ ನಿಮ್ಮ ದೇಹವನ್ನು ಹಲವು ರೋಗಗಳ ವಿರುದ್ಧ ಹೋರಾಡುವಂತೆ ಸಶಕ್ತಗೊಳಿಸುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ,
ಕೊತ್ತಂಬರಿ ಬೀಜವನ್ನು ತುಸುವೇ ಹುರಿದು ಪರಿಮಳ ಬರುತ್ತಿರುವಾಗ ಕೆಳಗಿಳಿಸಿ. ಮಿಕ್ಸಿಯಲ್ಲಿ ರುಬ್ಬಿ ನಯವಾದ ಪುಡಿ ಮಾಡಿ ಇಟ್ಟುಕೊಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಬಿಸಿನೀರಿಗೆ ಚಿಟಿಕೆ ಪುಡಿ ಹಾಕಿ ಕುಡಿಯುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಮೂಲವ್ಯಾಧಿ ಸಮಸ್ಯೆ ಇರುವವರು ಇದಕ್ಕೆ ಹಾಲು ಹಾಗೂ ಬೆಲ್ಲ ಬೆರೆಸಿ ಕುದಿಸಿ ನಿತ್ಯ ಬೆಳಿಗ್ಗೆ – ಸಂಜೆ ಕುಡಿದರೆ ರೋಗದ ಲಕ್ಷಣಗಳು ಕಡಿಮೆಯಾಗುತ್ತವೆ. ಕೊತ್ತಂಬರಿ ಪುಡಿ ಬೆರೆಸಿದ ನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಯ ದುರ್ವಾಸನೆಯ ಸಮಸ್ಯೆಯೂ ಇಲ್ಲವಾಗುತ್ತದೆ.
ಮಕ್ಕಳಿಗೆ ಜ್ವರ ಬಂದಾಗ ದನಿಯಾ ಹಾಗು ಶುಂಠಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಜ್ವರ ಕಡಿಮೆಯಾಗುತ್ತದೆ. ಕೊತ್ತಂಬರಿ ನೆನೆಸಿದ ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆಗಳೂ ದೂರವಾಗುತ್ತವೆ.