ಮಿಲ್ಕ್ ಶೇಕ್ ಎಲ್ಲರಿಗೂ ಇಷ್ಟವಾಗುತ್ತದೆ. ಆಯಾ ಋತುವಿನ ಹಣ್ಣಿನ ಜೊತೆ ಹಾಲು ಮಿಕ್ಸ್ ಮಾಡಿ ಶೇಕ್ ಮಾಡಿ ಕುಡಿಯುವ ಅಭ್ಯಾಸ ಅನೇಕರಿಗಿದೆ. ಕೆಲವರು ಬನಾನಾ ಶೇಕ್ ಪ್ರೀತಿಯಿಂದ ಕುಡಿಯುತ್ತಾರೆ. ಬನಾನಾ ಶೇಕ್ ಕುಡಿಯುವ ಹವ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ಇದನ್ನು ಬಿಟ್ಟುಬಿಡಿ. ಬಾಳೆ ಹಣ್ಣಿನ ಜೊತೆ ಹಾಲು ಸೇರಿಸುವುದು ಬಹಳ ಅಪಾಯಕಾರಿ.
ಹಾಲು ಹಾಗೂ ಬಾಳೆಹಣ್ಣಿನ ಮಿಶ್ರಣ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಮಗೆ ಹಾಲು ಹಾಗೂ ಬಾಳೆಹಣ್ಣು ಎರಡೂ ಪ್ರಿಯ ಎಂದಾದಲ್ಲಿ ಮೊದಲು ಹಾಲನ್ನು ಸೇವಿಸಿ. 20 ನಿಮಿಷ ಬಿಟ್ಟು ಬಾಳೆಹಣ್ಣು ತಿನ್ನಿ.
ಬಾಳೆಹಣ್ಣು ಹಾಗೂ ಹಾಲನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಜೊತೆಗೆ ನಿದ್ರೆ ಸಮಸ್ಯೆ ಕಾಡುತ್ತದೆ.
ಅಸ್ತಮಾ ರೋಗಿಗಳು ಹಾಲು ಹಾಗೂ ಬಾಳೆಹಣ್ಣನ್ನು ತಿನ್ನಬೇಡಿ. ಇದು ಕಫವನ್ನು ಹೆಚ್ಚಿಗೆ ಮಾಡುತ್ತದೆ. ಇದ್ರಿಂದ ಕೆಮ್ಮು-ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ.
ಆಯುರ್ವೇದದ ಪ್ರಕಾರ ಬಾಳೆಹಣ್ಣು ಹಾಗೂ ಹಾಲು ಹೊಂದಿಕೆಯಾಗದ ಆಹಾರಗಳಲ್ಲಿ ಒಂದು.
ಇದರ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಕೆಮ್ಮು, ಶೀತ, ಅಲರ್ಜಿ ಸಮಸ್ಯೆ ಕಾಡುತ್ತದೆ.