ಬಳ್ಳಾರಿ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಗ್ರಾಹಕರ ವ್ಯಾಜ್ಯಗಳ ಕಾಯ್ದೆಯಡಿ 2011 ರಿಂದ 2015 ರವರೆಗಿನ ದಾಖಲಾಗಿ ಇತ್ಯರ್ಥವಾದ ಪ್ರಕರಣಗಳಲ್ಲಿ ಅವಧಿ ಮೀರಿದ ವ್ಯಾಜ್ಯಗಳ ಪ್ರಕರಣಗಳನ್ನು ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆದ್ದರಿಂದ ಕಕ್ಷಿದಾರರು, ವಕೀಲರು ತಮಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಈ ಅವಧಿಯಲ್ಲಿ ಸಲ್ಲಿಸಿರುವ ಮೂಲ, ಅವಶ್ಯಕ ಮತ್ತು ಇತರೆ ಆದೇಶಗಳ ದಾಖಲೆಗಳನ್ನು ಡಿಸೆಂಬರ್ 08 ರೊಳಗಾಗಿ ಈ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆತಳಿತಾಧಿಕಾರಿ ಆದಪ್ಪ ರಾಮಪ್ಪ ಜುಮ್ಮಾಲಪುರ ಅವರು ತಿಳಿಸಿದ್ದಾರೆ.
ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗೆ ತಾವು ಹಾಜರು ಪಡಿಸಿರುವ ಮೂಲ ದಾಖಲೆಗಳನ್ನು ಪಡೆದುಕೊಳ್ಳದಿದ್ದಲ್ಲಿ, ರಾಜ್ಯ ಗ್ರಾಹಕರ ಆಯೋಗದ ನಿರ್ದೇಶನದನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.