alex Certify ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಮೊಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಮೊಸರು

ಮೊಸರು ಪ್ರತಿನಿತ್ಯ ಮನೆಗಳಲ್ಲಿ ಬಳಕೆ ಮಾಡುವ ಆಹಾರ ಪದಾರ್ಥಗಳಲ್ಲಿ ಒಂದು. ಈ ಮೊಸರನ್ನ ಹಲವಾರು ವಿಧಗಳಲ್ಲಿ ಸೇವನೆ ಮಾಡಬಹುದು. ಮೊಸರಿನಲ್ಲಿ ಪೋಷಕಾಂಶದ ಪ್ರಮಾಣ ಹೇರಳವಾಗಿ ಇರೋದ್ರಿಂದ ನಿಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ 1 ಕಪ್​ ಮೊಸರು ಮಹತ್ವದ ಪಾತ್ರವನ್ನ ವಹಿಸುತ್ತೆ.

ಮೊಸರಿನಲ್ಲಿ ಕಾಲ್ಶಿಯಂ ಪ್ರಮಾಣ ಅಗಾಧವಾಗಿ ಇರುತ್ತೆ. ಇದರಿಂದ ನಿಮ್ಮ ಹಲ್ಲು ಹಾಗೂ ಮೂಳೆಗಳು ಹೆಚ್ಚು ಬಲಶಾಲಿಯಾಗಲಿದೆ. ಹೀಗಾಗಿ ನಿತ್ಯವೂ ಮೊಸರನ್ನ ಸೇವನೆ ಮಾಡಿ.

ಮೊಸರು ಅಗಾಧ ಪೋಷಕಾಂಶಗಳನ್ನ ಹೊಂದಿರುವ ಆಹಾರ. ಇದು ದೇಹದಲ್ಲಿ ಆಂಟಿ ಆಕ್ಸಿಡೆಂಟ್​ನಂತೆ ಕಾರ್ಯವನ್ನ ನಿರ್ವಹಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

ನಿಮ್ಮ ಕೂದಲು ಹಾಗೂ ಮುಖದ ಸೌಂದರ್ಯವನ್ನ ಹೆಚ್ಚಿಸಬೇಕು ಅಂದರೆ ಮೊಸರಿಗಿಂತ ಒಳ್ಳೆಯ ಪದಾರ್ಥ ನಿಮಗೆ ಬೇರೊಂದು ಸಿಗಲಿಕ್ಕಿಲ್ಲ. ಮೊಸರು, ಕಡ್ಲೆ ಹಿಟ್ಟು ಹಾಗೂ ನಿಂಬೆರಸವನ್ನ ಹಿಂಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ಮುಖವನ್ನ ತೊಳೆಯಿರಿ. ಮೊಸರು ಬ್ಲೀಚ್​ನಂತೆ ಕೆಲಸ ಮಾಡೋದ್ರಿಂದ ನಿಮ್ಮತ್ವಚೆಗೆ ಕಾಂತಿ ಸಿಗಲಿದೆ. ರೇಷ್ಮೆಯಂತ ಕೂದಲು ಬೇಕು ಎಂಬ ಆಸೆಯುಳ್ಳವರು ಈ ಮೊಸರನ್ನ ತಲೆಗೆ ಹಚ್ಚಿಕೊಳ್ಳಬಹುದು. ಮೊಸರು ಹಚ್ಚಿದ ಬಳಿಕ ಅರ್ಧ ಗಂಟೆಗಳ ಕಾಲ ತಲೆಯನ್ನ ಹಾಗೆಯೇ ಬಿಟ್ಟು ಬಳಿಕ ಬೆಚ್ಚನೆಯ ನೀರಿನಲ್ಲಿ ತಲೆಯನ್ನ ತೊಳೆದುಕೊಳ್ಳಿ.

ನಿತ್ಯ ಮೊಸರನ್ನ ಸೇವನೆ ಮಾಡೋದ್ರಿಂದ ದೇಹದಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆ ಮಾಡಬಹುದು. ಮೊಸರಿಗೆ ರಕ್ತದೊತ್ತಡವನ್ನ ಕಡಿಮೆ ಮಾಡುವ ಸಾಮರ್ಥ್ಯವಿದೆ. ಇದು ನಿಮ್ಮ ಕೊಬ್ಬಿನ ಪ್ರಮಾಣವನ್ನ ಸರಿದೂಗಿಸಿಕೊಂಡು ಹೋಗುತ್ತೆ. ಇದರಿಂದ ನಿಮ್ಮ ಹೃದಯದ ಆರೋಗ್ಯ ಕೂಡ ಸಮತೋಲನದಲ್ಲಿ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...